ಸಾಂಸಾರಿಕ ಜಂಜಡಕ್ಕೆ ಬೇಸತ್ತು ನದಿಗೆ ಹಾರಿ ಪ್ರಾಣ ಕಳೆದುಕೊಂಡ!

F
ವ್ಯಕ್ತಿ ಹಾರಿದ್ದ ನದಿ ಹಾಗೂ ಸೇತುವೆ ಮೇಲೆ ನೆರೆದ ಜನರು
Published on

ವಿಜಯಪುರ: ರಾಜ್ಯದಲ್ಲಿ ಕೆಲವು ದಿನಗಳಿಂದ ಕೇಳಿ ಬರುತ್ತಿರುವ ಆತ್ಮಹತ್ಯೆ ಪ್ರಕರಣಗಳ ಸರಣಿ ಇನ್ನೂ ಮುಂದುವರಿದಿದ್ದು, ಹೊಸದಾಗಿ ಮತ್ತೊಂದು ಆತ್ಮಹತ್ಯೆ ಪ್ರಕರಣ ವರದಿಯಾಗಿದೆ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ದೇವಣಗಾಂವ ನಿವಾಸಿ ಸಿದ್ದಪ್ಪ ಅಳ್ಳಗಿ ಮೃತಪಟ್ಟ ವ್ಯಕ್ತಿ.

ಈತ ಕೌಟುಂಬಿಕ ಕಲಹ ಕಾರಣಕ್ಕೆ ಆತ್ಯಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸಂಸಾರದ ಜಂಜಡ ತಾಳಲಾಗದೆ ಈತ ಭೀಮಾ ನದಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾನೆ. ದೇವಣಗಾಂವ ಸೇತುವೆ ಮೇಲಿಂದ ಹಾರಿದ್ದಾನೆ. ಆಲಮೇಲ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೂಡಲೇ ಜನರು ನೆರೆದು ಸಹಾಯಕ್ಕೆ ಕ್ರಮಕೈಗೊಳ್ಳುವಷ್ಟರಲ್ಲಿ ಆತ ನೀರಿನಲ್ಲಿ ಮುಳುಗಿಹೋಗಿದ್ದಾನೆ.

ಕಳೆದ ಒಂದೆರಡು ವಾರದಿಂದ ಕೌಟುಂಬಿಕ ಕಲಹ ಕಾರಣಕ್ಕೆ ನಡೆಯುತ್ತಿರುವ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಿದೆ. ಒಂದೇ ಕುಟುಂಬದ ಐವರು, ಮೂವರು, ಇಬ್ಬರು.. ಹೀಗೆ ಜೊತೆಯಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net