ಒಂದು ತೆಂಗಿನಕಾಯಿ ತೂಕ 1ಕೆಜಿ 100 ಗ್ರಾಂ

nrp 3 (1)
Published on

ಎನ್.ಆರ್.ಪುರ: ಸಿಪ್ಪೆ ತೆಗೆದ ಒಂದು ತೆಂಗಿನಕಾಯಿ ಅಬ್ಬಬ್ಬಾ ಎಂದರೆ 600 ರಿಂದ 700 ಗ್ರಾಂ ತೂಕ ಬರಬಹುದು. ಆದರೆ, ತಾಲೂಕಿನ ಬಿ.ಎಚ್.ಕೈಮರದ ಎಂ.ವಿ.ರಾಜೇಂದ್ರಕುಮಾರ್ ಅವರ ತೆಂಗಿನ ತೋಟದಲ್ಲಿ ಸಿಪ್ಪೆ ತೆಗೆದ ಒಂದು ತೆಂಗಿನಕಾಯಿ 1ಕೆಜಿ 100 ಗ್ರಾಂ ತೂಕವಿದೆ. ಸಾಮಾನ್ಯವಾಗಿ ನಮ್ಮ ತೋಟದಲ್ಲಿ 550 ಗ್ರಾಂ ನಿಂದ 600 ಗ್ರಾಂ ತೂಕದ ತೆಂಗಿನಕಾಯಿ ಬರುತ್ತಿತ್ತು. ತಿಪಟೂರು,ಅರಸಿಕೆರೆ, ಚೆನ್ನರಾಯಪಟ್ಟಣ, ಚಿಕ್ಕನಾಯಕನ ಹಳ್ಳಿ ಭಾಗದಲ್ಲಿ ಒಂದು ತೆಂಗನಕಾಯಿ 650 ರಿಂದ 700 ಗ್ರಾಂ ತೂಕ ಬರುತ್ತದೆ. ಅಪರೂಪ ಎಂಬಂತೆ ಮೊದಲ ಬಾರಿಗೆ ನಮ್ಮ ತೆಂಗಿನ ತೋಟದ ಒಂದು ಮರದಲ್ಲಿ ಬಿಟ್ಟ ಎಲ್ಲ ತೆಂಗಿನಕಾಯಿಗಳು ಉತ್ತಮ ತೂಕ ಬಂದಿದೆ. ಪ್ರತಿ ತೆಂಗಿನಕಾಯಿಯೂ 700 ರಿಂದ 800 ಗ್ರಾಮ ತೂಕ ಬಂದಿದೆ. ಆದರೆ, ಒಂದು ತೆಂಗಿನಕಾಯಿ ಮಾತ್ರ 1 ಕೆ.ಜಿ.100 ಗ್ರಾಂ ಇದೆ ಎಂದು ಎಂ.ವಿ.ರಾಜೇಂದ್ರಕುಮಾರ್ ತಿಳಿಸಿದರು. ಪ್ರಸ್ತುತ 1 ಕೆ.ಜಿ. ತೆಂಗಿನಕಾಯಿ ಬೆಲೆ 80 ರೂ ಇದೆ. ಆ ಪ್ರಕಾರ ಈ ತೆಂಗನಕಾಯಿ ಬೆಲೆ 80 ರೂಪಾಯಿಗೂ ಮೀರಿದೆ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net