ಕೆಎಂಸಿಯಲ್ಲಿ ಕಿಮೊಥೆರಪಿ ಡೇ ಕೇರ್​ ಕೇಂದ್ರದ ಉದ್ಘಾಟನೆ

udp-21-kmc
Published on

ಉಡುಪಿ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಶಿರಡಿ ಸಾಯಿಬಾಬಾ ಕ್ಯಾನ್ಸರ್​ ಬ್ಲಾಕ್​ನಲ್ಲಿ ಹೊಸದಾಗಿ ನವೀಕರಿಸಿದ ವೈದ್ಯಕಿಯ ಆಂಕೊಲಾಜಿ ಹೊರರೋಗಿ ವಿಭಾಗ ಮತ್ತು ಕೀಮೋಥೆರಪಿ ಡೇ ಕೇರ್​ ಕೇಂದ್ರವನ್ನು ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್​.ಎಸ್​. ಬಲ್ಲಾಳ್​ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಅತ್ಯಾಧುನಿಕ ವೈದ್ಯಕಿಯ ಆರೈಕೆಯನ್ನು ಒದಗಿಸಲು ಮತ್ತು ರೋಗಿಗಳ ಸೌಕರ್ಯವನ್ನು ಹೆಚ್ಚಿಸಲು ಸಂಸ್ಥೆಯು ಬದ್ಧವಾಗಿದೆ ಎಂದು ಹೇಳಿದರು.

ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನಗಳ ಸಹ ಉಪ ಕುಲಪತಿ ಡಾ. ಶರತ್​ ಕೆ. ರಾವ್​ ಮಾತನಾಡಿ, ನವೀಕರಿಸಿದ ಸೌಲಭ್ಯಗಳು ರೋಗಿಗಳು ಮತ್ತು ಸಂದರ್ಶಕರಿಗೆ ಆರಾಮದಾಯಕ ಅನುಭವವನ್ನು ಖಾತ್ರಿಪಡಿಸುತ್ತದೆ. ಡೇ ಕೇರ್​ ಕೇಂದ್ರವು ಕೀಮೋಥೆರಪಿ ಮತ್ತು ಇತರ ವಿಶೇಷ ಆಂಕೊಲಾಜಿ ಚಿಕಿತ್ಸೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದರು.

ವೈದ್ಯಕಿಯ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕರಾದ ಡಾ. ಕಾರ್ತಿಕ್​ ಉಡುಪ ಮತ್ತು ಡಾ. ಅನಂತ್​ ಪೈ ಮಾಹಿತಿ ನೀಡಿದರು. ಸಮಾರಂಭದಲ್ಲಿ ಕಸ್ತೂರ್ಬಾ ವೈದ್ಯಕಿಯ ಕಾಲೇಜು (ಕೆಎಂಸಿ) ಡೀನ್​ ಡಾ. ಪದ್ಮರಾಜ್​ ಹೆಗ್ಡೆ, ಮಾಹೆ ಮಣಿಪಾಲದ ಭೋದನಾ ಆಸ್ಪತ್ರೆಗಳ ಸಿ ಓ ಓ ಡಾ. ಆನಂದ್​ ವೇಣುಗೋಪಾಲ್​ , ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕಿಯ ಅಧೀಕ್ಷಕ ಡಾ. ಅವಿನಾಶ್​ ಶೆಟ್ಟಿ, ಮಣಿಪಾಲ್​ ಸಮಗ್ರ ಕ್ಯಾನ್ಸರ್​ ಕೇರ್​ ಸೆಂಟರ್​ ಸಂಯೋಜಕ ಡಾ. ನವೀನ್​ ಸಾಲಿನ್ಸ್​ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net