ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ, ಹಳ್ಳಿಚಲೋ ಅಭಿಯಾನಕ್ಕೆ ಚಾಲನೆ

27 TKE 1(1)
ಮತ್ತೊಮ್ಮೆ ನರೇಂದ್ರ ಮೋದಿ ಅಭಿಯಾನದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರ ಮನೆ ಗೋಡೆ ಮೇಲೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಕಮಲ ಚಿಹ್ನೆ ಅರಳಿಸಿದರು. ಶಂಭೈನೂರು ಆನಂದಪ್ಪ, ಬಿ.ಸೋಮಶೇಖರ್, ಬಿ.ಎಸ್.ಚೈತ್ರ ಶ್ರೀ ಇತರರಿದ್ದರು.
Published on

ತರೀಕೆರೆ: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ತಾಲೂಕು ಘಟಕ ಮಂಗಳವಾರ ಪಟ್ಟಣದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ಹಾಗೂ ಹಳ್ಳಿಚಲೋ ಅಭಿಯಾನ ಆರಂಭಿಸಿತು. ಬಿಜೆಪಿ ಕಾರ್ಯಕರ್ತರ ಮನೆ ಗೋಡೆ ಮೇಲೆ ಕಮಲ ಚಿಹ್ನೆ ಅರಳಿಸುವ ಮೂಲಕ ಮಾಜಿ ಶಾಸಕ ಡಿ.ಎಸ್.ಸುರೇಶ್ ಮತ್ತೊಮ್ಮೆ ನರೇಂದ್ರ ಮೋದಿ ಅಭಿಯಾನಕ್ಕೆ ಚಾಲನೆ ನೀಡಿದರು. ಬಳಿಕ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸುಭದ್ರ ಭಾರತ ನಿರ್ಮಾಣಕ್ಕಾಗಿ ಸಮಗ್ರ ಯೋಜನೆ ಅನುಷ್ಟಾನಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ದೇಶ ಮಾತ್ರವಲ್ಲ, ಜನ ಸಾಮಾನ್ಯರ ಗ್ಯಾರಂಟಿಯಾಗಿದ್ದಾರೆ. ಅವರ ನಾಯಕತ್ವ ಭಾರತವಷ್ಟೇ ಅಲ್ಲ ವಿಶ್ವವೇ ಮೆಚ್ಚಿದ್ದು, ಸದ್ಯದಲ್ಲೇ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ನಮ್ಮ ಸಂಕಲ್ಪವಾಗಲಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸುವ ಉದ್ದೇಶ ಬಿಜೆಪಿಯದ್ದಾಗಿದೆ ಎಂದರು. ಕಾರ್ಯಕರ್ತರು ವಿಧಾನ ಸಭೆ ಚುನಾವಣೆಯಲ್ಲಿ ಎದುರಾದ ಸೋಲನ್ನು ಮರೆತು ತಳಮಟ್ಟದಿಂದ ಸಂಘಟಿತರಾಗಬೇಕು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಹುಮತ ಕೊಡಿಸುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದು ಕರೆ ನೀಡಿದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಂಭೈನೂರು ಆನಂದಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷೆ ಬಿ.ಎಸ್.ಚೈತ್ರ ಶ್ರೀ, ತಾಲೂಕು ಬಿಜೆಪಿ ಸಂಚಾಲಕ ಬಿ. ಸೋಮಶೇಖರ್, ಮಂಡಲ ಅಧ್ಯಕ್ಷ ಪ್ರತಾಪ್, ಪ್ರಧಾನ ಕಾರ್ಯದರ್ಶಿ ಬಿ.ಎಸ್.ವಸಂತಕುಮಾರ್, ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರಾಜೇಶ್ವರಿ, ಟಿಎಪಿಸಿಎಂಎಸ್ ಅಧ್ಯಕ್ಷ ಎನ್.ಬಿ.ಸುಧಾಕರ್, ಬಿಜೆಪಿ ನಗರ ಘಟಕ ಅಧ್ಯಕ್ಷ ಎಚ್.ಬಿ.ರೇಣುಕಪ್ಪ, ತಾಲೂಕು ಯುವ ಮೋರ್ಚಾ ಮಾಜಿ ಅಧ್ಯಕ್ಷ ಡಿ.ಎನ್.ಶಿವರಾಜ್‌ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net