ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶ್ರಮಿಸಿ

4blh11congre-Web
ಬೈಲಹೊಂಗಲದಲ್ಲಿ ಕಾಂಗ್ರೆಸ್ ಪ್ರತಿಜ್ಞಾ ದಿನ ಕಾರ್ಯಕ್ರಮ ಜರುಗಿತು. ಗುರುಪುತ್ರಪ್ಪ ಹೊಸಮನಿ, ಡಾ.ವಿ.ಎಸ್. ಸಾಧುನವರ, ಮಲ್ಲಪ್ಪ ಮುರಗೋಡ, ಶಿವರುದ್ರಪ್ಪ ಹಟ್ಟಿಹೊಳಿ, ಬಸವರಾಜ ಕೌಜಲಗಿ, ಕಿರಣ ಸಾಧುನವರ ಇತರರು ಇದ್ದರು.
Published on

ಬೈಲಹೊಂಗಲ: ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಕಾಂಗ್ರೆಸ್ ಯುವ ಮುಖಂಡ ಬಸವರಾಜ ಕೌಜಲಗಿ ಹೇಳಿದ್ದಾರೆ.

ಪಟ್ಟಣದ ಶಿವಬಸವ ಕಲ್ಯಾಣ ಮಂಟಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಕಾರ್ಯಾಧ್ಯಕ್ಷರ ಪ್ರತಿಜ್ಞಾ ವಿಧಿ ಸಮಾರಂಭದ ನಿಮಿತ್ತ ಸಂವಿಧಾನ ಪೀಠಿಕೆ, ಕಾಂಗ್ರೆಸ್ ಪ್ರತಿಜ್ಞಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕಾರ್ಯಕ್ರಮ ವೀಕ್ಷಿಸಲು ಬೈಲಹೊಂಗಲ ಮತಕ್ಷೇತ್ರದ 32 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಸೋಮೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಪುತ್ರಪ್ಪ ಹೊಸಮನಿ, ಹಿರಿಯ ಮುಖಂಡರಾದ ಡಾ.ವಿ.ಎಸ್. ಸಾಧುನವರ, ಮಲ್ಲಪ್ಪ ಮುರಗೋಡ, ಕೆಪಿಸಿಸಿ ಉಸ್ತುವಾರಿಗಳಾದ ರಾಬರ್ಟ್ ದದ್ದಾಪುರಿ, ಪ್ರಕಾಶ ಘಾಟಗೆ, ಶಿವರುದ್ರಪ್ಪ ಹಟ್ಟಿಹೊಳಿ, ಕಿರಣ ಸಾಧುನವರ ಜಿಪಂ ಸದಸ್ಯ ಅನಿಲ ಮೆಕಲಮರ್ಡಿ, ಶಂಕರಗೌಡ ಪಾಟೀಲ, ಪುರಸಭೆ ಸದಸ್ಯರಾದ ರಾಜಶೇಖರ ಮೂಗಿ, ಬಸವರಾಜ ಜನ್ಮಟ್ಟಿ, ಮಹಾಂತೇಶ ಮತ್ತಿಕೊಪ್ಪ, ಕುತುಬುದ್ದಿನ ಮುಲ್ಲಾ, ಈರಣ್ಣಾ ಬೆಟಗೇರಿ, ಮಹಾಂತೇಶ ಕಳ್ಳಿಬಡ್ಡಿ, ಉಮೇಶ ಬೋಳೆತ್ತಿನ, ರಾಜು ನರಸಣ್ಣವರ, ಪ್ರಕಾಶ ಪಾಸಲಕರ, ಎ.ಎಂ.ಲೋದಿ, ಹಸನ ಗೊರವನಕೊಳ್ಳ, ಆಶೋಕ ವಾಲಿ, ಮಂಜುನಾಥ ಮಲಬಣ್ಣವರ ನೂರಾರು ಕಾರ್ಯಕರ್ತರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net