

ಮುಂಡರಗಿ: ಎಲ್ಲ ಸಮುದಾಯದವರು ಸೇರಿ ತಿಂಗಳಿಗೊಮ್ಮೆ ಮನೆ ಮನದಲ್ಲಿ ಚನ್ನಮ್ಮ ಎಂಬ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಮೂಲಕ ವೀರರಾಣಿ ಕಿತ್ತೂರ ಚನ್ನಮ್ಮ ಸಾಧನೆ ತಿಳಿಸಿಕೊಡಲಾಗುವುದು ಎಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ.ಪಾಟೀಲ ಹೇಳಿದರು.
ಪಟ್ಟಣದ ರಜನಿಕಾಂತ ದೇಸಾಯಿ ನಿವಾಸ ಆವರಣದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಹಿಳಾ ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಮನೆ ಮನದಲ್ಲಿ ಚನ್ನಮ್ಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಪಂಚಮಸಾಲಿ ಸಮಾಜ ಮಹಿಳಾ ಘಟಕದ ಮಾಜಿ ಖಜಾಂಚಿ ಶೋಭಾ ಪಾಟೀಲ ಮಾತನಾಡಿ, ದಿಟ್ಟ ಮಹಿಳೆ ಚನ್ನಮ್ಮಳ ಜೀವನ ಚರಿತ್ರೆ ಅರಿತು ಅವರ ತತ್ತ್ವ ಮಾರ್ಗದಲ್ಲಿ ನಡೆಯಬೇಕು ಎಂದರು.
ಹೂವಿನಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ಪಂಚಮಸಾಲಿ ಸಮಾಜ ಕೃಷಿ ಅವಲಂಬಿತವಾಗಿದ್ದು ಶೈಕ್ಷಣಿಕವಾಗಿ ಅರ್ಥಿಕವಾಗಿ ಹಿಂದುಳಿದ್ದಾರೆ. ಹೀಗಾಗಿ 2ಎ ಮೀಸಲಾತಿಗೆ ಪಂಚಮಸಾಲಿ ಪೀಠದ ಉಭಯಶ್ರೀಗಳು ಹೋರಾಟ ಮಾಡುತ್ತಿದ್ದಾರೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಶೋಭಾ ಹೊಟ್ಟಿನ, ಅನ್ನಪೂರ್ಣ ದೇಸಾಯಿ, ಕರಬಸಪ್ಪ ಹಂಚಿನಾಳ, ದೇವಪ್ಪ ಕಂಬಳಿ, ಹಾಲಪ್ಪ ದೇಸಾಯಿ, ರಜನಿಕಾಂತ ದೇಸಾಯಿ, ರಮೇಶಗೌಡ ಪಾಟೀಲ, ನಾಗರಾಜ ಮುರಡಿ, ಪ್ರಮೋದ ಇನಾಮತಿ, ವೀರೇಶ ಹಡಗಲಿ, ಸಿದ್ದು ದೇಸಾಯಿ, ದೇವಪ್ಪ ಇಟಗಿ, ಸೋಮು ಹಕ್ಕಂಡಿ, ಸರೋಜಾ ಹಂಚಿನಾಳ, ರೇಖಾ ದೇಸಾಯಿ, ಚಂದ್ರು ಹಂದ್ರಾಳ, ನೇತ್ರಾ ಭಾವಿಹಳ್ಳಿ, ಜ್ಯೋತಿ ಗಣಪ್ಪನವರ, ಶಂಭುಲಿಂಗನಗೌಡ ಹಕ್ಕಂಡಿ, ಅಮೀನಸಾಬ ಬಿಸನಹಳ್ಳಿ ಉಪಸ್ಥಿತರಿದ್ದರು.