ಮಣಿಯಂಪಾರೆಯಲ್ಲಿ ಓಣಂ ಉಡ್ಕಾಣಾಂ

onam
Published on

ಪೆರ್ಲ: ಮಣಿಯಂಪಾರೆಯ ಸಂತ ಲಾರೆನ್ಸರ ಚರ್ಚ್‌ನ ಕೆಥೋಲಿಕ್ ಸಭಾದ ವತಿಯಿಂದ ಓಣಂ ಉಡ್ಕಾಣಾಂ ಎಂಬ ವೈವಿಧ್ಯಮಯ ಕಾರ್ಯಕ್ರಮ ಜರುಗಿತು.

ಚರ್ಚ್ ಧರ್ಮಗುರು ನೇಲ್ಸನ್ ಡಿ.ಆಲ್ಮೇಡಾ ಉದ್ಘಾಟಿಸಿದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ವಿಲ್ಸನ್ ಡಿಸೋಜ ಸಭೆ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪ್ರಾಂತ್ಯ ಕೆಥೋಲಿಕ್ ಸಭಾದ ಅಧ್ಯಕ್ಷ ಆಲ್ವೀನ್ ಡಿಸೋಜ ಪಾನೀರ್ ಮುಖ್ಯ ಅತಿಥಿಗಳಾಗಿದ್ದರು. ಕಥೋಲಿಕ್ ಸಭಾ ಕಾಸರಗೋಡು ವಲಯಾಧ್ಯಕ್ಷ ರಾಜು ಜೋನ್ ಡಿಸೋಜ ಎಣ್ಮಕಜೆ ಉಪಸ್ಥಿತರಿದ್ದರು. ಘಟಕಾಧ್ಯಕ್ಷ ಅಮೃತ್ ಲಾಲ್ ಡಿಸೋಜ ಬೊಲ್ಕಿನಡ್ಕ ಸ್ವಾಗತಿಸಿದರು. ಕವಿತಾ ಮೋರಸ್ ವಂದಿಸಿದರು. ರೋಘಿನ್ ಡಿಸೋಜ ನಿರೂಪಿಸಿದರು. ಬಳಿಕ ವಿವಿಧ ಆಟೋಟ ಸ್ಪರ್ಧೆ, ಓಣಂ ಔತಣಕೂಟ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net