ಪದ್ಮಗಿರಿ ಕಲಾಕುಟೀರದಲ್ಲಿ ಓಣಂ ಸಂಧ್ಯಾ

ksd
ನಾರಿಚಿನ್ನಾರಿಯ 8ನೇ ಸರಣಿ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಕಾತ್ಯಾಯನಿ ಕುಂಜಿಬೆಟ್ಟು ಅವರ ಐದು ಕೃತಿಗಳನ್ನು ಅನಾವರಣಗೊಳಿಸಲಾಯಿತು.
Published on

ಕಾಸರಗೋಡು: ಕಾಸರಗೋಡಿನ ರಂಗ ಚಿನ್ನಾರಿ ಸಂಘಟನೆಯ ಅಂಗ ಸಂಸ್ಥೆ ನಾರಿಚಿನ್ನಾರಿಯ 8ನೇ ಸರಣಿ ಕಾರ್ಯಕ್ರಮ ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ‘ಓಣಂಸಂಧ್ಯಾ’ ಹೆಸರಿನಲ್ಲಿ ನಡೆಯಿತು.

ಕೇಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕಿ ಡಾ.ಲಕ್ಷ್ಮೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳಾ ಸಬಲೀಕರಣಕ್ಕೆ ಪುರುಷರು ಬೆಂಬಲವಾಗಿ ನಿಲ್ಲುತ್ತಿರುವುದು ಶ್ಲಾಘನೀಯ. ಕಲೆಗಳಲ್ಲಿ ತೊಡಗಿಸಿಕೊಳ್ಳುವುದು ಸಬಲೀಕರಣಕ್ಕೆ ದಾರಿ ಎಂದರು.

ಲೇಖಕಿ ಡಾ.ಕಾತ್ಯಾಯನಿ ಕುಂಜಿಬೆಟ್ಟು ಅವರ ಐದು ಕೃತಿಗಳನ್ನು ಕಾಸರಗೋಡಿನ ಐವರು ಲೇಖಕಿಯರು ಅನಾವರಣಗೊಳಿಸಿದರು. ‘ಏಕತಾರಿ ಸಂಚಾರಿ’ಯನ್ನು ವಿಜಯಲಕ್ಷ್ಮೀ ಶಾನುಬೋಗ್, ‘ರಾಮ ಧಾನ್ಯ ಚರಿತೆ’-ಸರ್ವಮಂಗಳ ಜಯ್ ಪುಣಿಚಿತ್ತಾಯ, ‘ಶಿವರಾಮ ಕಾರಂತರ ಕನ್ನಡಪ್ರಜ್ಞೆ’-ದಿವ್ಯಾ ಗಟ್ಟಿ ಪರಕ್ಕಿಲ, ‘ಕೊಕ್ಕೋ ಕೋಕೋ’-ಸ್ನೇಹಲತಾ ದಿವಾಕರ್, ‘ವಾಚಿಕೆ’- ಡಾ.ಮಹೇಶ್ವರಿ ಬಿಡುಗಡೆಗೊಳಿಸಿದರು.

ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕಿ ಲಕ್ಷ್ಮೀ ಕೆ. ಕೃತಿ ಪರಿಚಯಿಸಿದರು. ಡಾ.ಕಾತ್ಯಾಯನಿ ಕುಂಜಿಬೆಟ್ಟು ಹಾಗೂ ಕಾಸರಗೋಡಿನ ಹಿರಿಯ ನೃತ್ಯ ಗುರು ವಿದುಷಿ ಶಶಿಕಲಾ ಅವರನ್ನು ನಾರಿಚಿನ್ನಾರಿ ಗೌರವಾಧ್ಯಕ್ಷೆ ತಾರಾ ಜಗದೀಶ್ ಹಾಗೂ ಅಧ್ಯಕ್ಷೆ ಸವಿತಾ ಗೌರವಿಸಿದರು. ದಿವ್ಯಾ ಗಟ್ಟಿ ಪರಕ್ಕಿಲ ಮತ್ತು ಪ್ರತಿಜ್ಞಾ ರಂಜಿತ್ ಸಾಧಕರ ಪರಿಚಯ ಪತ್ರ ವಾಚಿಸಿದರು. ಓಣಂ ಸಂಬಂ ಹೂವಿನ ರಂಗೋಲಿ, ತಿರುವಾದಿರ ಹಾಗೂ ಓಣಂ ಹಾಡಿನೊಂದಿಗೆ ಸದಸ್ಯೆಯರು ಕಾರ್ಯಕ್ರಮಕ್ಕೆ ಮೆರುಗನ್ನಿತ್ತರು.

ಕಾಗದದಿಂದ ಸ್ಥಳದಲ್ಲೇ ಗಣಪನ ಮೂರ್ತಿ ನಿರ್ಮಿಸಿದ ಬಾಲ ಪ್ರತಿಭೆ ಸಾಯಾಹ್ನ್ ಅವರನ್ನು ಕಾಸರಗೋಡು ಚಿನ್ನಾ ಅಭಿನಂದಿಸಿದರು. ನಾರಿ ಚಿನ್ನಾರಿ ಸದಸ್ಯೆಯರಾದ ಧನ್ಯಾ ಮುರಳಿ ಆಸ್ರ(ಶಾಸ್ತ್ರೀಯ ನೃತ್ಯ), ಅಶ್ವತಿ(ಜಾನಪದ ನೃತ್ಯ), ಶರಣ್ಯಾ ನಾರಾಯಣನ್(ಓಣಂ ಹಾಡು), ಸ್ನಿದ್ಧ ಕೃಷ್ಣ(ಭಾವಗೀತೆ), ಶೈಲಜಾ ಈಶ್ವರ್ ಭಟ್(ಹವ್ಯಕ ಗೀತೆ), ಸಮನ್ವಿತಾ(ದೇಶಭಕ್ತಿ ಗೀತೆ), ಉನ್ನತಿ ಪೈ(ಭಕ್ತಿಗೀತೆ), ಕೃಪಾ ನಿಧಿ ಪಾರೆಕಟ್ಟ(ಏಕ ಪಾತ್ರಾಭಿನಯ) ಪ್ರಸ್ತುತಪಡಿಸಿದರು. ಸಮನ್ವಿತಾ ಗಣೇಶ್ ಪ್ರಾರ್ಥಿಸಿದರು. ಸವಿತಾ ಸ್ವಾಗತಿಸಿದರು. ಬಬಿತಾ ಸತೀಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net