ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಓಣಂ

suraksha
ಹೊಸಂಗಡಿ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಮಂಗಳವಾರ ಓಣಂ ಹಬ್ಬ ಆಚರಿಸಲಾಯಿತು. ಸಂಸ್ಥೆಯ ಸಿಬ್ಬಂದಿ ಓಣಂ ಪೂಕಳಂ ಜತೆಗೆ ಇಸ್ರೋದ ಚಂದ್ರಯಾನ- 3ರ ಸವಿನೆನಪಿಗಾಗಿ ಹೂವಿನಲ್ಲಿ ಚಂದಿರನ ಸಹಿತ ರಾಕೆಟ್ ರಚಿಸಿದರು.
Published on

ಮಂಗಳೂರು: ಹೊಸಂಗಡಿ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಮಂಗಳವಾರ ಓಣಂ ಹಬ್ಬ ಆಚರಿಸಲಾಯಿತು. ಸಂಸ್ಥೆಯ ಸಿಬ್ಬಂದಿ ಓಣಂ ಪೂಕಳಂ ಜತೆಗೆ ಇಸ್ರೋದ ಚಂದ್ರಯಾನ- 3ರ ಸವಿನೆನಪಿಗಾಗಿ ಹೂವಿನಲ್ಲಿ ಚಂದಿರನ ಸಹಿತ ರಾಕೆಟ್ ರಚಿಸಿದರು. ಡಾ.ಮುರಲೀ ಮೋಹನ್ ಚೂಂತಾರು ಮಾತನಾಡಿ, ಕೇರಳದ ನಾಡ ಹಬ್ಬ ಓಣಂ ಇಡೀ ದೇಶಕ್ಕೆ ಸುಭಿಕ್ಷೆ ನೀಡಲಿ ಎಂದು ಹಾರೈಸಿದರು. ವೈದ್ಯೆ ಡಾ.ರಾಜಶ್ರೀ ಮೋಹನ್, ಡಾ.ಶರತ್ ಪಾರೆ ಸುಳ್ಯ, ಡಾ.ಟಾಮ್ ತಂಪಿ, ದಿವಾಕರ್, ದಂತ ಪರಿಚಾರಕಿಯರಾದ ರಮ್ಯ, ಚೈತ್ರಾ, ಸುಶ್ಮಿತಾ, ಜಯಶ್ರೀ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net