

ಕಾಸರಗೋಡು: ಪರವನಡ್ಕದ ವೃದ್ಧ ಸದನದಲ್ಲಿ ಓಣಂ ಹಬ್ಬ ಆಚರಿಸಲಾಯಿತು. ಕಾಸರಗೋಡು ಜಿಲ್ಲಾಡಳಿತದ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೃದ್ಧಾಶ್ರಮದ ಸದಸ್ಯರಿಗೆ ಓಣಂ ಅಂಗವಾಗಿ ಹೊಸ ಬಟ್ಟೆ ಕೊಡಿಸಲಾಯಿತು. ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್, ವೃದ್ಧ ಸದನದ ಅಧೀಕ್ಷಕ ನಿಶಾಂತ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಅಹಮದ್ ಶೆರೀನ್, ನಿರ್ಮಲ್ ಕಾಡಗಂ ಉಪಸ್ಥಿತರಿದ್ದರು. ಜಾನಪದ ಹಾಡುಗಾರ ಅಭಿರಾಜ್ ಮಧು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಹಾಗೂ ಇತರ ಇಲಾಖೆ ಅಧಿಕಾರಿಗಳು ವೃದ್ಧ ಸದನದ ಸದಸ್ಯರೊಂದಿಗೆ ಓಣಂ ಸಂಭ್ರಮವನ್ನು ಹಂಚಿಕೊಂಡರು.