

ಕಾಸರಗೋಡು: ಸಾಮಾಜಿಕ ಪೊಲೀಸ್ ವಿಭಾಗ ಕಾಸರಗೋಡು, ಜನಮೈತ್ರಿ ಪೊಲೀಸ್ ಠಾಣೆ ಹೊಸದುರ್ಗದ ನೇತೃತ್ವದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಎಸ್‌ಪಿಸಿ ಕೆಡೆಟ್‌ಗಳು ಅಂಬಲತ್ತರ ಸ್ನೇಹಾಲಯದ ಸದಸ್ಯರಿಗೆ ಓಣಂ ಔತಣ ಬಡಿಸುವುದರ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಹೊಸದುರ್ಗ ಸರ್ಕಾರಿ ಹೈಯರ್ ಸೆಕೆಂಡರಿ ಪಿಟಿಎ ಅಧ್ಯಕ್ಷ ವಿ.ವಿ.ರಂಜಿರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಎ.ವಿ.ಸುರೇಶ್ ಬಾಬು ಸಮಾರಂಭ ಉದ್ಘಾಟಿಸಿದರು. ಮುಖ್ಯಶಿಕ್ಷಕ ಎಂ.ಪಿ.ರಾಜೇಶ್ ಓಣಂ ಸಂದೇಶ ನೀಡಿದರು. ಎಸ್‌ಪಿಸಿ ಸಹಾಯಕ ನೋಡಲ್ ಅಧಿಕಾರಿ ತಂಬಾನ್ ಟಿ. ಮುಖ್ಯ ಭಾಷಣ ಮಾಡಿದರು. ಜನಮೈತ್ರಿ ಸಹಾಯಕ ನೋಡಲ್ ಅಧಿಕಾರಿ ರಾಜೀವನ್ ಕೆ.ಪಿ.ವಿ, ಸಿಬ್ಬಂದಿ ಕಾರ್ಯದರ್ಶಿ ಪಿ.ಬಾಬುರಾಜ್, ಪೊಲೀಸ್ ಅಧಿಕಾರಿಗಳಾದ ಟಿ.ಟಿ.ವಿ.ಸಿಂಧು, ಟಿ.ವಹೀದತ್, ಕೆ.ರಾಗೇಶ್, ಟಿ.ಆರ್.ರಮ್ಯತಾ ಹಾಗೂ ಎಸ್‌ಪಿಸಿ ಪ್ರಭಾರಿ ಶಿಕ್ಷಕರು ಉಪಸ್ಥಿತರಿದ್ದರು.
ಜನಮೈತ್ರಿ ಬೀಟ್ ಅಧಿಕಾರಿ ಪ್ರದೀಪನ್ ಕೊತ್ತೋಳಿ ಸ್ವಾಗತಿಸಿದರು. ಸ್ನೇಹಾಲಯದ ನಿರ್ದೇಶಕ ಈಶೋದಾಸ್ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ ನಡೆದ ಗೀತ ಮೇಳಕ್ಕೆ ಪ್ರದೀಪ್ ತ್ರಿಕರಿಪುರ್ ಮತ್ತು ಮನು ಇಮ್ಯಾನುಯೆಲ್ ನೇತೃತ್ವ ನೀಡಿದರು.