ಚೆನ್ನಯ್ಯನಕೋಟೆಯಲ್ಲಿ ವಿಜೃಂಭಣೆಯ ಓಣಂ ಅಚರಣೆ

18adarshkdga7
Published on

ಮಡಿಕೇರಿ: ಹಿಂದೂ ಮಲಯಾಳಿ ಸಮಾಜ ಚೆನ್ನಯ್ಯನಕೋಟೆ ಸಮಿತಿ ವತಿಯಿಂದ ಓಣಂ ಆಚರಣೆ ವಿಜೃಂಭಣೆಯಿಂದ ನಡೆಯಿತು.

ಚೆನ್ನಯ್ಯನಕೋಟೆ ಅಯ್ಯಪ್ಪ ದೇವಸ್ಥಾನದಿಂದ ಮಹಾಬಲಿ ವೇಷಧಾರಿ ಚೆಂಡ ವಾದ್ಯಗಳೊಂದಿಗೆ ಕೇರಳ ಶೈಲಿಯ ಉಡುಪುಗಳನ್ನು ಧರಿಸಿ ಸಮಾಜದ ನೂರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಚೆನ್ನಯ್ಯನಕೋಟೆ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ಓಣಂ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಸಾರ್ವಜನಿಕರ ಪುರುಷರ ಹಗ್ಗಜಗ್ಗಾಟದಲ್ಲಿ ಕಾರ್ಗಿಲ್ ಬಾಯ್ಸ ಸಿದ್ದಾಪುರ ಪ್ರಥಮ ಹಾಗೂ ಸಾಗರ್ ಫ್ರೆಂಡ್ಸ್ ಚೆನ್ನಯ್ಯನಕೋಟೆ ದ್ವಿತೀಯ ಸ್ಥಾನ ಪಡೆಯಿತು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ವೀಣಾ ಫ್ರೆಂಡ್ಸ್ ಪ್ರಥಮ ಹಾಗೂ ಲಕ್ಕಿ ಫ್ರೆಂಡ್ಸ್ ದ್ವಿತೀಯ ಸ್ಥಾನ ಪಡೆಯಿತು.


ಮಡಿಕೆ ಹೊಡೆಯುವುದು, ಸಂಗೀತ ಕುರ್ಚಿ, ಪಾಸಿಂಗ್ ಬಾಲ್, ಮಕ್ಕಳಿಗೆ ಮಿಠಾಯಿ ಹೆಕ್ಕುವುದು, ಭಾರದ ಗುಂಡು ಎಸೆತ ಸ್ಪರ್ಧೆಗಳು ಸಮಾಜ ಬಾಂಧವರಿಗೆ ನಡೆಯಿತು. ಸುಮಾರು ೨೧ಕ್ಕೂ ಹೆಚ್ಚು ಬಗೆಯ ವಿವಿಧ ರೀತಿಯ ಖಾದ್ಯಗಳನ್ನೊಳಗೊಂಡ ಓಣಂ ಸದ್ಯ ವಿಶೇಷ ಭೋಜನವನ್ನು ಎರಡು ಸಾವಿರಕ್ಕೂ ಅಧಿಕ ಸಾರ್ವಜನಿಕರು ಸವಿದರು.


ಸಮಾಜದ ವತಿಯಿಂದ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಶಶಿಕುಮಾರ್, ಚೆಂಡೆ ಶಾಜಿ ಹಾಗೂ ಚೆಸ್ಕಾಮ್ ಲೈನ್ ಮ್ಯಾನ್ ಶ್ರೀಧರ್‌ರವರನ್ನು ಸನ್ಮಾನಿಸಲಾಯಿತು. ೧೦ ನೇ ತರಗತಿ ಹಾಗೂ ೧೨ನೇ ತರಗತಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಶರಣ್ಯ ಹಾಗೂ ಮೇಘರವರಿಗೆ ಧನಸಹಾಯವನ್ನು ನೀಡಲಾಯಿತು. ಇದೇ ಸಂದರ್ಭ ಸಮಾಜದ ಬಾಂಧವರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.


ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚೆನ್ನಯ್ಯನಕೋಟೆ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಕೆ.ಮಧುಸೂದನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ ಗಣೇಶ್, ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಶಶಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net