

ಬದಿಯಡ್ಕ: ಬಳ್ಳಪದವು ವೀಣಾವಾದಿನಿ ಸಂಗೀತ ವಿದ್ಯಾಪೀಠದಲ್ಲಿ ಭಾನುವಾರ ಓಣಂ ಹಬ್ಬ ಆಚರಿಸಲಾಯಿತು.
ವೀಣಾವಾದಿನಿ ನಿರ್ದೇಶಕ ಯೋಗೀಶ ಶರ್ಮ ಬಳ್ಳಪದವು ನೇತೃತ್ವದಲ್ಲಿ ಪೆರ್ಲ ಕೃಷ್ಣ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ನ್ಯೂ ಪವರ್ ಟೆಕ್ ಇಂಜಿನಿಯರಿಂಗ್ ಸಂಸ್ಥೆ ಸಿಇಒ ಮನೋಜ್ ಕೆ.ಆರ್., ಯಕ್ಷಗಾನ ತಾಳಮದ್ದಳೆ ಕಲಾವಿದ ಕೋಟೆ ರಾಮ ಭಟ್, ನಿವೃತ್ತ ಮುಖ್ಯಶಿಕ್ಷಕ ಪಿಲಿಂಗಲ್ಲು ಕೃಷ್ಣ ಭಟ್, ಪತ್ರಕರ್ತ ಅಖಿಲೇಶ್ ಯಾದವ್ ಹಾಗೂ ಪೆರ್ಲ ಕೃಷ್ಣ ಭಟ್ ಪುತ್ರ ರಾಜಾರಾಮ ಪೆರ್ಲ ಶುಭ ಹಾರೈಸಿದರು.
ಅಪರಾಹ್ನ ಮಧುಮಿತಾ ಪುತ್ತೂರು ಅವರಿಂದ ವೀಣಾವಾದನ ಕಛೇರಿ ನಡೆಯಿತು. ವೀಣಾವಾದಿನಿ ನಿರ್ದೇಶಕ ಯೋಗೀಶ ಶರ್ಮ ಬಳ್ಳಪದವು ಸ್ವಾಗತಿಸಿದರು. ಕವನ ಮಂಗಳೂರು ನಿರೂಪಿಸಿದರು. ನವೀನ್ ಸರಳಾಯ ವಂದಿಸಿದರು.