ಕುಶಾಲನಗರದಲ್ಲಿ ಕೇರಳ ಸಮಾಜದಿಂದ ಓಣಂ ಸಂಭ್ರಮ

Onam celebration by Kerala society in Kushalanagar
Published on

ಕುಶಾಲನಗರ:

ಹಿಂದೂ ಸಂಸ್ಕೃತಿಯನ್ನು ಮೇಳೈಸುವ ಸುಂದರ ಆಚರಣೆ ಓಣಂ ಎಂದು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಕುಶಾಲನಗರದ ಕೇರಳ ಸಮಾಜದ ವತಿಯಿಂದ ಭಾನುವಾರ ನಡೆದ ಓಣಂ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಕೇರಳೀಯರ ಸಂಸ್ಕೃತಿ ಸಂಪ್ರದಾಯಗಳನ್ನು ಪೀಳಿಗೆಯಿಂದ ಪೀಳಿಗೆಗೆ ಒಯ್ಯುವ ಆಚರಣೆ ಬಗ್ಗೆ ಶ್ಲಾಘಿಸಿ ರಂಜನ್,ಇAದಿನ ಪೀಳಿಗೆಯ ಮಕ್ಕಳು ಗುರು ಹಿರಿಯರು ಹಾಗೂ ಪೋಷಕರಿಗೆ ಗೌರವ ಸಲ್ಲಿಸುವ ಸಂಸ್ಕ್ರತಿಯೊAದಿಗೆ ವಿದ್ಯಾವಂತರಾಗಿ ದೇಶಕ್ಕೆ ಗೌರವ ತರುವಂತೆ ಕರೆಕೊಟ್ಟರು.

ಹಿಂದೂ ಮಲೆಯಾಳಿ ಸಮಾಜದ ಕೊಡಗು ಜಿಲ್ಲಾಧ್ಯಕ್ಷ ವಿ.ಎಂ. ವಿಜಯ್ ಮಾತನಾಡಿ ಕಳೆದು ಹೋಗುತ್ತಿರುವ ಹಿಂದೂ ಸಂಸ್ಕ್ರತಿ ಸಂಪ್ರದಾಯಗಳನ್ನು ಜೋಪಾನ ಮಾಡುವ ಹೊಣೆಗಾರಿಕೆ ಬಗ್ಗೆ ಮಹಿಳೆಯರಿಗೆ ಮನವರಿಕೆ ಮಾಡಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಮುರುಳಿ, ಮಡಿಕೇರಿ ಎಸ್‌ಎನ್‌ಡಿ ಪಿ ಅಧ್ಯಕ್ಷ ಹರೀಶ್ ಕುಮಾರ್, ವಾಸು, ಕೇರಳ ಸಮಾಜದ ಉಪಾಧ್ಯಕ್ಷ ಕೆ.ಬಾಬು, ಕಾರ್ಯದರ್ಶಿ ರಾಬಿನ್, ನಿರ್ದೇಶಕರಾದ ರಾಯ್,ಎಂ.ಜೆ.ಪ್ರಕಾಶ್, ಸುಶೀಲಾ, ಎಂ.ಎಸ್. ಶಾಂತಿ, ಆನಂದ್,ರAಜಿತ್ ಕುಮಾರ್, ಧನರಾಜ್, ಅಜಿತ ಧನರಾಜ್ ಇದ್ದರು.

ಮಾವೇಲಿ ವೇಷಧಾರಿಯಾಗಿ ಕಣ್ಣೂರಿನ ರಾರೀಶ್ ಗಮನ ಸೆಳೆದರು. ಕಾರ್ಯಕ್ರಮಕ್ಕೂ ಮೊದಲು ಕೇರಳ ಸಮಾಜದ ಸ್ಥಾಪಕ ಅಧ್ಯಕ್ಷ ಕೆ. ಶಿವಾನಂದನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ದಾನಿಗಳು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net