ಮುಳಿಂಜದಲ್ಲಿ ಅಡುಗೆ ನಿರ್ವಾಹಕಿಗೆ ಗೌರವಾರ್ಪಣೆ

onam
Published on

ಉಪ್ಪಳ: ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓಣಂ ಆಚರಣೆಯೊಂದಿಗೆ ಇಲ್ಲಿನ ಅಡುಗೆ ನಿರ್ವಾಹಕಿ ಕಲ್ಯಾಣಿ ಅವರಿಗೆ ಗೌರವಾರ್ಪಣೆ ನಡೆಯಿತು.

ಮುಳಿಂಜ ವಿದ್ಯಾಸಂಸ್ಥೆಯಲ್ಲಿ ಅಡುಗೆ ನಿರ್ವಾಹಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಕಲ್ಯಾಣಿಯಕ್ಕ ಅವರು ಅನಾರೋಗ್ಯ ನಿಮಿತ್ತ ನಿವೃತ್ತಿ ಹೊಂದಿದ್ದಾರೆ. ಅವರನ್ನು ಶಾಲಾ ಶಿಕ್ಷಕ-ರಕ್ಷಕ ಬಳಗದಿಂದ ಶುಕ್ರವಾರ ನಡೆದ ಶಾಲಾ ಓಣಂ ದಿನಾಚರಣೆಯಲ್ಲಿ ಗೌರವಿಸಲಾಯಿತು.

ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಉದ್ಘಾಟಿಸಿದರು. ಮಂಜೇಶ್ವರ ಬಿ.ಆರ್.ಸಿ ಯ ಬಿ.ಪಿ.ಒ ಜಾಯ್, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಫಿರೋಜ್, ಎಸ್.ಆರ್.ಜಿ ಕನ್ವೀನರ್ ಫಾತಿಮತ್ ಫಝೀನಾ, ಮಂಗಲ್ಪಾಡಿ ಪಂಚಾಯಿತಿ ಅಧ್ಯಕ್ಷೆ ಫಾತಿಮತ್ ರುಬೀನಾ, ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧಕ್ಷೆ ಇರ್ಫಾನ ಇಕ್ಬಾಲ್ ಇದ್ದರು.

ಶಿಕ್ಷಕ ರಿಯಾಜ್ ಪೆರಿಂಗಡಿ ಸ್ವಾಗತಿಸಿ, ಕಾವ್ಯಾಂಜಲಿ ಪ್ರತಾಪನಗರ ವಂದಿಸಿದರು. ಶಿಕ್ಷಕಿ ಅನಿತಾ ಪ್ರತಾಪನಗರ ನೇತೃತ್ವದಲ್ಲಿ ಪೂಕಳಂ ಮಹಾಬಲಿ ಹುಲಿ ಕುಣಿತ, ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಮನೋರಂಜನಾ ಕಾರ್ಯಕ್ರಮ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net