

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ವೆಸ್ಟ್ ಯೂನಿಟ್ ವತಿಯಿಂದ ಓಣಂ ಹಬ್ಬದ ಅಂಗವಾಗಿ ಯೂನಿಟ್ ಸದಸ್ಯರಿಗೆ ಓಣಂ ಉಡುಪು ವಿತರಿಸಲಾಯಿತು.
ಯೂನಿಟ್ ಅಧ್ಯಕ್ಷ ವಸಂತ ಕೆರೆಮನೆ ಅವರು ಮಹಿಳಾ ಸಮಿತಿ ಸದಸ್ಯೆ ಶಾಲಿನಿ ರಾಜೇಂದ್ರನ್ ಅವರಿಗೆ ಓಣಂ ಉಡುಪು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಸದಸ್ಯ ಜಯಪ್ರಕಾಶ್ ಅವರಿಗೆ ಯೂನಿಟ್ ನೀರೀಕ್ಷಕ ಶ್ರೀಜಿತ್ ಓಣಂ ಉಡುಪು ನೀಡಿದರು.
ಎಕೆಪಿಎ ಜಿಲ್ಲಾ ಸ್ಪೋರ್ಟ್ಸ್ ಕೋ ಆರ್ಡಿನೇಟರ್ ರತೀಶ್ ರಾಮು, ವಲಯ ಕೋಶಾಧಿಕಾರಿ ಮನು ಎಲ್ಲೋರ, ವಲಯ ಸಮಿತಿ ಸದಸ್ಯ ಸುಬ್ರಹ್ಮಣ್ಯ ಎಂ.ಎಸ್., ಮೈಂದಪ್ಪ, ಜತೆ ಕಾರ್ಯದರ್ಶಿ ಅಭಿಷೇಕ್ ಸಿ., ಪಿಆರ್‌ಒ ವಾಸು ಎ., ಸಮಿತಿ ಸದಸ್ಯ ಚಂದ್ರಶೇಖರ ಎಂ., ಯೂನಿಟಿನ ಹಿರಿಯ ಸದಸ್ಯರಾದ ಕೃಷ್ಣ ಎಲ್ಲೋರ, ನಾರಾಯಣನ್ ಟಿ., ರಹ್‌ಮಾನ್ ಚೆಮ್ನಾಡ್, ಸದಸ್ಯರಾದ ದಿನೇಶ್ ಕಲ್ಲಂಗಾಯಿ, ವಿನೋದ್ ಕಲ್ಲಂಗಾಯಿ, ದೀಪ್ತ್ ಎಲ್ಲೋರ, ಚರಣ್ ರಾಜ್, ಸಂತೋಶ್ ತ್ರಿದಳ್, ಜಯಕೃಷ್ಣ, ವಿಘ್ನೇಶ್ ಬಿ., ದೀಪಕ್, ಪದ್ಮನಾಭನ್ ದೇಳಿ, ಮಹಿಳಾ ಸದಸ್ಯರಾದ ಶೈಲಜಾ ಪದ್ಮನಾಭ, ಸಂಧ್ಯಾ ಶೈಲೇಶ್, ಅನುರಾಧಾ ಚಂದ್ರಶೇಖರ ಉಪಸ್ಥಿತರಿದ್ದರು. ಯೂನಿಟ್ ಕಾರ್ಯದರ್ಶಿ ವಿಶಾಖ್ ಸ್ವಾಗತಿಸಿದರು. ಕೋಶಾಧಿಕಾರಿ ಗಣೇಶ್ ರೈ ವಂದಿಸಿದರು.