

ಮಂಜೇಶ್ವರ: ಕೇರಳದ ಪ್ರಧಾನ ನಾಡಹಬ್ಬವಾದ ಓಣಂ ಗುವೇದಪಡ್ಪು ಪ್ರೇರಣಾ ಸಾರ್ವಜನಿಕ ಗ್ರಂಥಾಲಯದ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಕೃಷ್ಣ ನಾಯ್ಕ ಮಾಸ್ತರ್ ಆನೆಕಲ್ಲು ಉದ್ಘಾಟಿಸಿ, ಹಬ್ಬಗಳು ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಹೂ ರಂಗೋಲಿ ಎಲ್ಲರ ಒಗ್ಗೂಡುವಿಕೆಯ ಸಂಕೇತವಾಗಿದ್ದು, ಎಲ್ಲ ಬಣ್ಣದ ಹೂಗಳು ಒಟ್ಟು ಸೇರಿದಾಗ ಒಂದು ಆಕರ್ಷಕವಾದ ರಂಗೋಲಿ ಮೂಡಿ ಬರುತ್ತದೆ. ಅದೇ ರೀತಿ ನಾವೆಲ್ಲರೂ ಒಟ್ಟಾಗಿ ಬಾಳಬೇಕು ಎಂದು ತಿಳಿಸಿದರು.
ಗ್ರಂಥಾಲಯ ಅಧ್ಯಕ್ಷ ಜಯರಾಮ ಕೊಣಿಬೈಲು ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆ ಜಮೀಲ, ಸರಸ್ವತಿ ಕೊಣಿಬೈಲು, ರುಬೀನಾ ಟೀಚರ್, ಪುಷ್ಪ್ಪಲತಾ, ಸವಿತಾ, ರುಕ್ಸಾನ, ದೀಕ್ಷಿತಾ, ಲಾವಣ್ಯ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು. ಹೂವಿನ ರಂಗೋಲಿ, ವಿವಿಧ ಆಟೋಟ ಸ್ಪರ್ಧೆ ನಡೆಯಿತು. ಗ್ರಂಥಾಲಯ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು ಸ್ವಾಗತಿಸಿದರು. ಗ್ರಂಥಪಾಲಕಿ ವಂದಿಸಿದರು.