ಆಚರಣೆಯಿಂದ ಸೌಹಾರ್ದ ವಾತಾವರಣ : ಡಾ.ಶಂಕರ ನಾರಾಯಣ ಭಟ್ ಅನಿಸಿಕೆ

Ksd_Onam
Published on

ಪೆರ್ಲ: ಓಣಂ ಆಚರಣೆ ಮೂಲಕ ಸಮಾಜದ ಎಲ್ಲ ಜನರು ಸೇರಿ ಸೌಹಾರ್ದ ವಾತಾವರಣ ನಿರ್ಮಾಣವಾಗಬೇಕು ಎಂದು ಡಾ.ಶಂಕರ ನಾರಾಯಣ ಭಟ್ ಪೆರ್ಲ ಅಭಿಪ್ರಾಯಪಟ್ಟರು.

ನಲ್ಕ ವಾಗ್ದೇವಿ ಶಾಲೆಯಲ್ಲಿ ಭಗತ್ ಸಿಂಗ್ ಗ್ರಂಥಾಲಯ, ಅಕ್ಷಯ ಯುವಕ ಮಂಡಲ, ಶಿಕ್ಷಕ ವರ್ಗ ಆಶ್ರಯದಲ್ಲಿ ಓಣಂ ಆಚರಣೆ ಉದ್ಘಾಟಿಸಿ ಮಾತನಾಡಿದರು.

ವಾಗ್ದೇವಿ ಸೇವಾ ಸಮಿತಿ ಅಧ್ಯಕ್ಷ, ಕವಿ ನಾರಾಯಣ ನಾಯ್ಕ, ಗ್ರಾ.ಪಂ ಸದಸ್ಯೆ ಆಶಾಲತಾ ಶುಭ ಹಾರೈಸಿದರು. ಮುಖ್ಯಶಿಕ್ಷಕ ಶ್ರೀಪತಿ, ವ್ಯಾಪಾರಿ ಅಬ್ಬಾಸ್ ಮಾತನಾಡಿದರು.

ಹಿರಿಯ ಕೃಷಿಕ ಕಿನಿಲ ಸುಬ್ರಾಯ ಭಟ್ ಓಟೆಕ್ಕಾಡು ಅವರನ್ನು ಸನ್ಮಾನಿಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗ್ರಂಥಾಲಯ ಅಧ್ಯಕ್ಷ ಶ್ರೀಧರ ಭಟ್ ಬೀಡುಬೈಲು ಅಧ್ಯಕ್ಷತೆ ವಹಿಸಿದ್ದರು.

ಓಣಂ ಔತಣದಲ್ಲಿ 17 ಬಗೆಯ ಖಾದ್ಯಗಳ ವ್ಯವಸ್ಥೆ ಮಾಡಲಾಗಿತ್ತು. ಶಿಕ್ಷಕರಾದ ಹರ್ಷಿತ್ ಸ್ವಾಗತಿಸಿದರು. ನಳಿನಿ ವಂದಿಸಿದರು. ಕಮಲಾಕ್ಷ ಕಾರ್ಯಕ್ರಮ ನಿರೂಪಿಸಿದರು.

ಶಶಿಧರ ಕುಲಾಲ್, ಗಂಗಾಧರ ಕುಲಾಲ್, ವಿನೋದ್, ಅಬೂಬಕ್ಕರ್, ಮಶ್ ಹುದಾ, ಈಶ್ವರ ನಾಯಕ್ ಕೇರಿಮೂಲೆ, ಚಂದ್ರಶೇಖರ ಕುದುಕೋಳಿ, ಪ್ರೇಮ ಭಟ್, ಸುಶ್ಮಾ ಶಶಿಧರ್ ಮುಂತಾದವರು ನೇತೃತ್ವ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net