ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ವೇದಿಕೆ

Untitled design (7)
ಸಿಂಧನೂರು ತಾಲೂಕಿನ ದೇವಿಕ್ಯಾಂಪ್ ಶಾಂತಿನಿಕೇತನ ಚಾಂಪಿಯನ್ ಪಬ್ಲಿಕ್ ಶಾಲೆಯಲ್ಲಿ ದೇವಿಕ್ಯಾಂಪ್ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಬಿಇಒ ಸೋಮಶೇಖರಗೌಡ ಉದ್ಘಾಟಿಸಿದರು. ಶಾಲೆಯ ಸಂಸ್ಥಾಪಕ ರಘನಾಥರೆಡ್ಡಿ, ಸಮನ್ವಯ ಅಧಿಕಾರಿ ಬಸಲಿಂಗಪ್ಪ, ಬಿಆರ್‌ಸಿ ಪಂಪಾಪತಿ, ಹೇಮಣ್ಣ, ಗ್ರಾಪಂ ಸದಸ್ಯರಾದ ಶರಣೇಗೌಡ, ಬಸವರಾಜ ಭಾವಿ ಇದ್ದರು.
Published on

ಸಿಂಧನೂರು: ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಕಾರಂಜಿ ಸೂಕ್ತ ವೇದಿಕೆ ಕಲ್ಪಿಸಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ ಹೇಳಿದರು.

ತಾಲೂಕಿನ ದೇವಿಕ್ಯಾಂಪ್ ಶಾಂತಿನಿಕೇತನ ಚಾಂಪಿಯನ್ ಪಬ್ಲಿಕ್ ಶಾಲೆಯಲ್ಲಿ ಜಿಪಂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿ, ಸಮೂಹ ಸಂಪನ್ಮೂಲ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಲಯ ಮಟ್ಟದ 2023-24 ನೇ ಸಾಲಿನ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.

ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಅವಶ್ಯಕ

ವಿದ್ಯಾರ್ಥಿಗಳು ವೇದಿಕೆಯಲ್ಲಿ ಅಡಗಿರುವ ಕಲೆಯನ್ನು ಪ್ರದರ್ಶಿಸಬೇಕು. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಅವಶ್ಯಕವಾಗಿವೆ. ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ಆಸಕ್ತಿವಹಿಸಬೇಕು ಎಂದರು.

ಶಾಲೆಯ ಸಂಸ್ಥಾಪಕ ರಘನಾಥರೆಡ್ಡಿ, ಸಮನ್ವಯ ಅಧಿಕಾರಿ ಬಸಲಿಂಗಪ್ಪ, ಬಿಆರ್‌ಸಿ ಪಂಪಾಪತಿ, ಹೇಮಣ್ಣ, ಗ್ರಾಪಂ ಸದಸ್ಯರಾದ ಶರಣೇಗೌಡ, ಬಸವರಾಜ ಭಾವಿ, ದೇವರಗುಡಿ ಗ್ರಾಪಂ ಪಿಡಿಒ ಸವಿತಾ, ಮುಖ್ಯಶಿಕ್ಷಕಿ ಪ್ರಭಾವತಿ, ಪ್ರಮುಖರಾದ ಗಿರೀಶ್, ಕಳಕಪ್ಪ ಗಡದ್, ಭರತಕುಮಾರ, ಸರ್ವಮಂಗಳ, ಬಸವರಾಜ ಜಾಡರ್, ರಾಮಕೃಷ್ಣ ನಾಯಕ್, ವೀರೇಶ ಮಲ್ಲಶೆಟ್ಟಿ, ಸೋಮಶೇಖರ್, ಶಂಕರದೇವರು ಹಿರೇಮಠ, ತಿಮ್ಮಪ್ಪ ದೇಸಾಯಿ, ಮೌಲಪ್ಪ ಭಂಡಾರಿ, ನಿರ್ಣಾಯಕರಾಗಿ ಮಂಜಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net