ಒನಕೆ ಓಬವ್ವ ಜಯಂತಿ ಅರ್ಥಪೂರ್ಣವಗಿ ಆಚರಿಸಿ

05 kudlagi 01
ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಗ್ರೇಡ್ 2 ತಹಸೀಲ್ದಾರ್ ಎಂ.ವಿ.ನೇತ್ರಾವತಿ ಮಾತನಾಡಿದರು. ಒನಕೆ ಓಬವ್ವ ಸಂಘದ ತಾಲೂಕು ಅಧ್ಯಕ್ಷ ಹಿರೇಕುಂಬಳಗುಂಟೆ ಉಮೇಶ, ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಮಾರಪ್ಪ, ರೈತ ಸಂಘದ ದೇವರಮನೆ ಮಹೇಶ, ಡಿ.ಬಿ.ಚಿತ್ತಪ್ಪ, ಸಿ.ಕೊಟ್ರೇಶ್ ಇದ್ದರು.
Published on

ಕೂಡ್ಲಿಗಿ: ಒನಕೆ ಓಬವ್ವ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದಾಳೆ ಎಂದು ಎಂದು ಗ್ರೇಡ್-2 ತಹಸೀಲ್ದಾರ್ ಎಂ.ವಿ. ನೇತ್ರಾವತಿ ಹೇಳಿದರು. ಪಟ್ಟಣದ ತಾಲೂಕು ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ತಾಲೂಕಿನ ಗುಡೇಕೋಟೆ ಓಬವ್ಬಳ ತವರೂರು. ಆದ್ದರಿಂದ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಒಂದು ಜನಾಂಗಕ್ಕೆ ಓಬವ್ವಳನ್ನು ಸೀಮಿತ ಮಾಡದೇ ಎಲ್ಲರೂ ಸೇರಿ ಆಚರಣೆ ಮಾಡಬೇಕು. ತಾಲೂಕಿನ 25 ಗ್ರಾಪಂ ಕಚೇರಿಗಳಲ್ಲಿ ಅಧ್ಯಕ್ಷ ಮತ್ತು ಸರ್ವ ಸದಸ್ಯರು ಒಳಗೊಂಡಂತೆ ಗ್ರಾಮಸ್ಥರನ್ನು ಕರೆಯಿಸಿ ಜಯಂತಿ ಆಚರಣೆ ಮಾಡಬೇಕು ಎಂದು ತಾಪಂ ವ್ಯವಸ್ಥಾಪಕ ಅಶ್ವಥ ಕುಮಾರ್‌ಗೆ ಸೂಚನೆ ನೀಡಿದರು.

ಜಯಂತಿ ದಿನ ಎಲ್ಲ ಗ್ರಾಮಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಓಬವ್ವಳ ಸಾಹಸಗಾಥೆಯನ್ನು ತಿಳಿಸಬೇಕು ಎಂದು ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಮಾರಪ್ಪ ತಿಳಿಸಿದರು. ಪಟ್ಟಣದ ಪ್ರಮುಖ ವೃತ್ತಗಳಿಗೆ ಜಯಂತಿ ದಿನ ವಿದ್ಯುತ್ ಅಲಂಕಾರ ಮಾಡುವಂತೆ ಸಭೆಯಲ್ಲಿ ತಿಳಿಸಿದರು.

ಒನಕೆ ಓಬವ್ವ ಸಂಘದ ತಾಲೂಕು ಅಧ್ಯಕ್ಷ ಹಿರೇಕುಂಬಳಗುಂಟೆ ಉಮೇಶ ಮಾತನಾಡಿ, ಜಯಂತಿಯನ್ನು ತಾಲೂಕು ಆಡಳಿತದ ವತಿಯಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ಗುಡೇಕೋಟೆ ಗ್ರಾಮದಲ್ಲಿ ಮುಂದಿನ ಫೆಬ್ರವರಿಯಲ್ಲಿ ಗುಡೇಕೋಟೆ ಉತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದರು.

ಕರವೇ ಅಧ್ಯಕ್ಷ ಕಾಟೇರ ಹಾಲೇಶ, ಮುಖಂಡರಾದ ಡಿ.ಬಿ.ಚಿತ್ತಪ್ಪ, ಕಟ್ಟೆ ಬಸಣ್ಣ, ಬಿಇಒ ಪದ್ಮನಾಭ ಕರಣಂ, ಪಪಂ ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ಸಿ.ಕೊಟ್ರೇಶ, ರೈತ ಸಂಘದ ದೇವರಮನೆ ಮಹೇಶ, ಗಾಂಧಿ ಸ್ಮಾರಕ ಸಮಿತಿ ಅಧ್ಯಕ್ಷ ಡಿ.ನಾಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net