

ಪಾಂಡವಪುರ: ವೀರ ವನಿತೆ ಒನಕೆ ಓಬವ್ವಳ ಧೈರ್ಯ ಮತ್ತು ಸಾಹಸ ನಮಗೆ ಸ್ಫೂರ್ತಿಯಾಗಬೇಕು ಎಂದು ತಹಸೀಲ್ದಾರ್ ಜಿ.ಎಸ್. ಶ್ರೇಯಸ್ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ನಾಡಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತದಿಂದ ಶನಿವಾರ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಓಬವ್ವ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಲು ಏಕಾಂಗಿಯಾಗಿ ಹೋರಾಡಿ ಶತ್ರುಗಳ ಮಟ್ಟ ಹಾಕಿ ಮಡಿದ ಧೀರ ಮಹಿಳೆ ಎಂದು ಬಣ್ಣಿಸಿದರು.
ದಸಂಸ ಮುಖಂಡ ಡಿ.ಕೆ.ಅಂಕಯ್ಯ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ಅನೇಕ ಮಹಿಳೆಯರು ತಮ್ಮ ಹೋರಾಟದ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಆ ಸಾಲಿನಲ್ಲಿ ಒನಕೆ ಓಬವ್ವ ಕೂಡ ನಿಲ್ಲುತ್ತಾಳೆ ಎಂದರು. ಗ್ರೇಡ್-2 ತಹಸೀಲ್ದಾರ್ ಎಸ್.ಸಂತೋಷ್, ವರುಣ್, ಶಿರಸ್ತೇದಾರ್ ಮೋಹನ್, ದ್ವಿತೀಯ ದರ್ಜೆ ಸಹಾಯಕ ಗುರುಮೂರ್ತಿ ಇತರರು ಇದ್ದರು.