

ಚಿತ್ರದುರ್ಗ : ಏಳುಸುತ್ತಿನ ಕೋಟೆಯನ್ನು ಶತ್ರುಗಳಿಂದ ರಕ್ಷಿಸಿದ್ದ ವೀರ ವನಿತೆ ಒನಕೆ ಓಬವ್ವಳ ಜಯಂತಿಯನ್ನು ಬುಧವಾರ ಸರಳವಾಗಿ ಆಚರಿಸ ಲಾಯಿತು. ಕರೊನಾ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಕಾರ‌್ಯಕ್ರಮ ಸಾಂಕೇತಿಕವಾಗಿ ನಡೆಯಿತು. ನಗರದ ಒನಕೆ ಓಬವ್ವಳ ಪ್ರತಿಮೆಗೆ ಮಾಲಾರ್ಪಣೆ ಸಲ್ಲಿಸಿದ ಛಲವಾದಿ ಸಮಾಜದ ಮುಖಂಡರು ಬಳಿಕ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ವೀರ ಮದಕರಿ ನಾಯಕರ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ,ಛಲವಾದಿ ಗುರುಪೀಠದ ಶ್ರೀ ಬಸವನಾಗಿ ದೇವ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಶ್ವೇತಾ ವಿರೇಶ್,ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್,ಮುಖಂಡರಾದ ರುದ್ರಮುನಿ,ಎಚ್.ಸಿ.ನಿರಂಜನಮೂರ್ತಿ,ನಾಗರಾಜ್,ಜಯ ಪ್ಪ, ಬಸವರಾಜ್, ತಿಪ್ಪೇಸ್ವಾಮಿ, ಭಾರ್ಗವಿ,ನಟರಾಜ್,ಮಂಜುಳಮ್ಮ,ಸುವರ್ಣಮ್ಮ,ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತ ರಿದ್ದರು. ಪ್ರತಿಮೆಗಳಿಗೆ ಮಾಲಾರ್ಪಣೆ ಮೊದಲು ಶ್ರೀಗಳ ಸಾನ್ನಿಧ್ಯದಲ್ಲಿ ಕೋಟೆ ಆವರಣದೊಳಗಿರುವ ಓಬವ್ವ ಸಮಾಧಿಗೆ ಪೂಜೆ ಸಲ್ಲಿಸ ಲಾಯಿತು. ಈ ವೇಳೆಯಲ್ಲೂ ನಾನಾ ಗಣ್ಯರು,ಮುಖಂಡರು ಇದ್ದರು.