ಸಮಯಕ್ಕೆ ಸರಿಯಾಗಿ ಸಾಲ ಪಾವತಿಸಿ

8 MANVI 01
ಮಾನ್ವಿಯಲ್ಲಿ ಆಯೋಜಿಸಿದ್ದ ವಿರೂಪಾಕ್ಷೇಶ್ವರ ಪತ್ತಿನ ಸೌಹಾರ್ದ ಸಹಕಾರಿಯ 20ನೇ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮವನ್ನು ಸಹಕಾರಿಯ ಅಧ್ಯಕ್ಷರಾದ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ, ಸಹಕಾರಿಯ ಸಿಇಒ ಶಂಕರಾನಂದ ಇದ್ದರು.
Published on

ಮಾನ್ವಿ: ವಿರೂಪಾಕ್ಷೇಶ್ವರ ಪತ್ತಿನ ಸೌಹಾರ್ದ ಸಹಕಾರಿ 20 ವರ್ಷದಲ್ಲಿ 3.2 ಕೋಟಿ ರೂ. ಲಾಭಗಳಿಸಿದ್ದು ಆಡಳಿತ ಮಂಡಳಿ, ಸಿಬ್ಬಂದಿ ಮತ್ತು ಸದಸ್ಯರ ಸಹಕಾರದಿಂದ ಉತ್ತಮ ಬೆಳವಣಿಗೆಯಾಗಿದೆ ಎಂದು ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ವಿರೂಪಾಕ್ಷೇಶ್ವರ ಸಹಕಾರಿ ಸೌಧದಲ್ಲಿ ಭಾನುವಾರ ವಿರೂಪಾಕ್ಷೇಶ್ವರ ಪತ್ತಿನ ಸೌಹಾರ್ದ ಸಹಕಾರಿಯ 20 ನೇ ವಾರ್ಷಿಕ ಸಾಮಾನ್ಯ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ಸಹಕಾರಿಯಲ್ಲಿ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಕಟ್ಟಿದರೆ ಸಹಕಾರಿ ಸಂಘಗಳು ಉಳಿಯಲು ಸಾಧ್ಯವಾಗುತ್ತದೆ ಎಂದರು.


ವಿಕಾಸ ಬ್ಯಾಕ್ ಅಧ್ಯಕ್ಷ ವಿಶ್ವನಾಥ ಹಿರೇಮಠ ಮಾತನಾಡಿ ವಿರೂಪಾಕ್ಷೇಶ್ವರ ಸಹಕಾರಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಅರ್ಥಿಕ ನೆರವನ್ನು ನೀಡುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ 3 ಶಾಖೆಗಳನ್ನು ತೆಗೆಯಲು ಮುಂದಾಗಿದ್ದು, ಸಹಕಾರಿಯ ಸ್ವಂತ 20 ಕೋಟಿ ರೂ. ಬಂಡವಾಳ ಇರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಸಹಕಾರಿಯ ಸಿಇಒ ಶಂಕರಾನಂದ ವಾರ್ಷಿಕ ವರದಿ ಮಂಡಿಸಿದರು. ನಿಲೋಗಲ್ ಶ್ರೀ ಮಠದ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಅಮರೇಗೌಡ ನಕ್ಕುಂದಿ, ಸದಸ್ಯರಾದ ಮಲ್ಲನಗೌಡ ನಕ್ಕುಂದಿ, ನಾಗರತ್ನಮ್ಮ ಪಾಟೀಲ್ ಬೆಟ್ಟದೂರು, ವಿರೂಪಾಕ್ಷೇಶ್ವರ ಸಹಕಾರಿಯ ನಿರ್ದೇಶಕರಾದ ಉಮಾಶಂಕರ, ಶಿವಯ್ಯಸ್ವಾಮಿ, ಬಸವರಾಜಪ್ಪಗೌಡ, ವಿಶ್ವರಾಧ್ಯಸ್ವಾಮಿ, ಸೂಗಪ್ಪಗೌಡ ರಾಘವೇಂದ್ರ ಶೆಟ್ಟಿ, ಪಾಡುರಂಗ ಶೆಟ್ಟಿ, ಶಶಿಕಲಾ ಪಾಟೀಲ್, ಈರಮ್ಮ, ಸುಜಯಾ, ಚನ್ನಬಸವರಾಜ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net