ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಿ

ಕುಷ್ಟಗಿಯ ಬಾಲಕಿಯರ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯರು ಉದ್ಘಾಟಿಸಿದರು. ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಇತರರಿದ್ದರು.
ಕುಷ್ಟಗಿಯ ಬಾಲಕಿಯರ ಸಹಿಪ್ರಾ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯರು ಉದ್ಘಾಟಿಸಿದರು. ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಇತರರಿದ್ದರು.
Published on

ಕುಷ್ಟಗಿ: ದಾನಗಳಲ್ಲಿ ರಕ್ತದಾನ ಶ್ರೇಷ್ಠ ಎಂದು ಪಟ್ಟಣದ ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯರು ಹೇಳಿದರು.

ಪಟ್ಟಣದ ಬಾಲಕಿಯರ ಸಹಿಪ್ರಾ ಶಾಲೆಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರರ ಜನ್ಮದಿನದ ನಿಮಿತ್ತ ನಗರದ ತೆಗ್ಗಿನ ಓಣಿ ಹೈದರ್ ಅಲಿ ಕಮಿಟಿ ಹಾಗೂ ಕೊಪ್ಪಳದ ಸಂಜೀವಿನಿ ರಕ್ತ ನಿಧಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ರಕ್ತಕ್ಕೆ ಬಡವ-ಶ್ರೀಮಂತ, ಜಾತಿ-ಧರ್ಮಗಳ ಭೇದವಿಲ್ಲ. ತುರ್ತು ಸಂದರ್ಭಗಳಲ್ಲಿ ರಕ್ತ ಭಂಡಾರಗಳ ಮೊರೆ ಹೋಗಬೇಕಾಗುತ್ತದೆ. ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನೇ ಭಂಡಾರಗಳಲ್ಲಿ ಸಂಗ್ರಹಿಸಲಾಗುತ್ತಿದೆ. ರಕ್ತದಾನದಿಂದ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ತಿಳಿಸಿದರು.

ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿ, ಜಾತಿ, ಧರ್ಮಕ್ಕೆ ಸೀಮಿತವಾಗದೆ ಸರ್ವ ಸಮುದಾಯಗಳ ಹಿತವನ್ನು ಬಯಸಿ ಸಾಮಾಜಿಕ ಕಾರ್ಯದಲ್ಲಿ ತೊಡಗಿರುವ ಯುವಕರ ಕಾರ್ಯ ಸಮಾಜಕ್ಕೆ ಮಾದರಿ ಎಂದರು. ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಪುರ ಮಾತನಾಡಿ, ಮೊಹಮ್ಮದ್ ಪೈಗಂಬರರು ಬಾಲ್ಯದಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥ ಪ್ರಜ್ಞೆಯಲ್ಲಿದ್ದರೂ ಸಮಾಜವನ್ನೇ ಪಾಲಕರು ಎಂದು ಭಾವಿಸಿ ಸಮಾಜಕ್ಕಾಗಿ ಬದುಕಿದ್ದಾರೆ ಎಂದರು.

ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಪುರಸಭೆ ಅಧ್ಯಕ್ಷ ಮಹಾಂತೇಶ ಕಲಬಾವಿ, ಸದಸ್ಯರಾದ ಜಿ.ಕೆ.ಹಿರೇಮಠ, ಮೈನುದ್ದೀನ್ ಮುಲ್ಲಾ, ಹೈದರ್ ಅಲಿ ಕಮಿಟಿಯ ಸದಸ್ಯರಾದ ಸದ್ದಾಂ ಡಿ.ಗುಮಗೇರಿ, ರಾಜಾಸಾಬ್ ಮಾಟಲದಿನ್ನಿ, ಹುಸೇನ್ ಕಾಯಿಗಡ್ಡಿ, ಮದರ್ ಬಾಷಾ ಬಾವಿಕಟ್ಟಿ, ಶ್ಯಾಮೀದ್ ಕಂಚಿ, ಪ್ರಮುಖರಾದ ಉಮೇಶ ಮಂಗಳೂರು, ಖಾಜಾಸಾಬ ಅತ್ತಾರ, ಆಯೂಬ್ ಮುಲ್ಲಾ, ಹುಸೇನ್ ಅಫೀಜ್ ಸಾಬ್, ಮೆಹಬೂಬ ಕಮ್ಮಾರ್, ಅಹ್ಮದ್ ಹುಸೇನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net