ಸನ್ಮಾರ್ಗದಲ್ಲಿ ನಡೆಸುವ ಪ್ರೇರಕ ಶಕ್ತಿಯೇ ಗುರು

30BLH1
Published on

ಬೈಲಹೊಂಗಲ: ನಾವು ಭಗವಂತನ ಕಪೆಗೆ ಪಾತ್ರರಾಗುವುದು ಅಷ್ಟು ಸುಲಭದ ಮಾತಲ್ಲ. ಅನುಣ ಭಗವಂತನ ನಾಮಸ್ಮರಣೆ ಮಾಡುವುದರ ಜತೆಗೆ ಗುರುವಿನ ಸೇವೆ ಮಾಡಿದಾಗ ಮಾತ್ರ ಸದ್ಗತಿ ಹೊಂದಲು ಸಾಧ್ಯ ಎಂದು ಉತ್ತರಕಾಶಿ ಸನ್ಯಾಸ ಆಶ್ರಮದ ಸುಖದೇವಾನಂದ ಗಿರಿ ಮಹಾರಾಜ ಹೇಳಿದರು.

ಸಮೀಪದ ಸುೇತ್ರ ಇಂಚಲದ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ 85ನೇ ವರ್ಧಂತಿ ಮಹೋತ್ಸವ, ಶ್ರೀಗಳ 55ನೇ ಪೀಠಾರೋಹಣ ಹಾಗೂ ವರ್ಷದ ಅಖಿಲ ಭಾರತ ವೇದಾಂತ ಪರಿಷತ್​ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ "ಚತುರ್ವಿದಾ ಭಂಜತೆ ಮಾಂ ಜನಾ@ ಸುಕತಿನೋರ್ಜುನ' ವಿಷಯದ ಪ್ರವಚನದ ಸಾನ್ನಿಧ್ಯ ವಹಿಸಿ ಮಾತನಾಡಿದರು. ತೋರಿಕೆ ಭಕ್ತಿಗೆ ಭಗವಂತನ ಅನುಗ್ರಹ ಸಿಗುವುದಿಲ್ಲ. ನಮ್ಮಲ್ಲಿರುವ ಜ್ಞಾನದ ಹಸಿವನ್ನು ನೀಗಿಸಿ ಸನ್ಮಾರ್ಗದ ಹಾದಿಯಲ್ಲಿ ನಡೆಸುವ ಶಕ್ತಿ ಗುರುವಿನಲ್ಲಿದೆ. ಸತ್ಸಂಗಗಳಲ್ಲಿ ಮಹಾತ್ಮರ ನುಡಿಮುತ್ತುಗಳನ್ನು ಆಲಿಸುವುದರ ಜತೆಗೆ ಗುರುಸೇವೆ ಮಾಡಿದಾಗ ಕೃಪೆ ಸಾಧ್ಯ ಎಂದರು.

ಹರಿದ್ವಾರ&ಮುಂಬೈ ಸಾಧನ ಸದನದ ಮಹಾಮಂಡಲೇಶ್ಬರ ದಿವ್ಯಾನಂದ ಪುರಿಜಿ ಮಹಾರಾಜ, ಧಾರವಾಡ ಮುರುರಾಜೇಂದ್ರ ಮಠದ ಜಗದ್ಗುರು ಮಲ್ಲಿಕಾರ್ಜುನ ಸ್ವಾಮೀಜಿ, ತಿರುಪತಿಯ ಲೀಲಾಪೀಠ ವಶಿಷ್ಠಾಶ್ರಮದ ಶ್ರೀನಿವಾಸ ಮಂಗಾಪುರ ಸ್ವಸ್ವರೂಪಾನಂದಗಿರಿ ಸ್ವಾಮೀಜಿ ಅವರು ಣಮಪಿ ಸಜ್ಜನ ಸಂಗತಿರೇಖಾ ಭವತಿ ಭವಾರ್ಣಾವ ತರಣೆ ನೌಕಾ ವಿಷಯದ ಕುರಿತು ಮಾತನಾಡಿ, ಸಾಧು&ಸಂತರ ಸಂಗದಿಂದ ಸುಖ&ಶಾಂತಿ ಸಿಗುತ್ತದೆ. ಬಾಲ್ಯದಿಂದಲೇ ಸಂಸ್ಕಾರ ನೀಡುವ ಕೆಲಸವನ್ನು ಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾಡುತ್ತಿದ್ದಾರೆ. ಯಯಾಗಾದಿಗಳಿಂದ ದುಷ್ಟಶಕ್ತಿ ನಾಶವಾಗುತ್ತದೆ ಎಂದರು.

ವರ್ಧಂತಿ ಮಹೋತ್ಸವದ ಸವಿನೆನಪಿಗಾಗಿ ಶ್ರೀಗಳ ಅಭಿನಂದನಾ ಗ್ರಂಥ ಸದ್ಗುರು ದರ್ಶನ ಸ್ಮರಣ ಸಂಚಿಕೆ ಲೋಕಾರ್ಪಣೆಯನ್ನು ಬೀದರ ಶಿವಕುಮಾರೇಶ್ವರ ಸ್ವಾಮೀಜಿ ನೆರವೇರಿಸಿದರು. ಬೀದರ ಚಿದಂಬರಾಶ್ರಮದ ಶಿವಕುಮಾರೇಶ್ಬರ ಸ್ವಾಮೀಜಿ ಅಧ್ಯತೆ ವಹಿಸಿದ್ದರು. ಡಾ.ಶಿವಾನಂದ ಭಾರತಿ ಸ್ವಾಮೀಜಿ, ಹೆದರಾಬಾದ ಸಂಪೂರ್ಣಾನಂದಗಿರಿ ಸ್ವಾಮೀಜಿ, ಹೊಸೂರ ಮಡಿವಾಳೇಶ್ವರಮಠದ ಗಂಗಾಧರ ಸ್ವಾಮೀಜಿ, ನದಿಇಂಗಳಗಾಂವದ ಸಿದ್ದಲಿಂಗ ಸ್ವಾಮೀಜಿ, ಸೊಲ್ಲಾಪುರ ಸಿದ್ದಾರೂಢ ಮಠದ ಮಾತೋಶ್ರೀ ಸುಶಾಂತಾದೇವಿ, ಕಾದರವಳ್ಳಿ ಗುರುಪುತ್ರ ಮಹಾರಾಜರು, ಹುಬ್ಬಳ್ಳಿ ಸಿದ್ದಾರೂಢ ಮಠದ ಟ್ರಸ್ಟ್​ ಕಮಿಟಿ ಅಧ್ಯ, ಬಸವರಾಜ ಕಲ್ಯಾಣಶೆಟ್ಟರ, ಸದಸ್ಯರಾದ ಶಾಮಾನಂದ ಪೂಜಾರ, ಉದಯಕುಮಾರ ನಾಯಕ, ವಿನಾಯಕ ೂಡಕೆ, ಕಷ್ಣಾ ಶುಗರ್ಸ ಅಧ್ಯ ಪರಪ್ಪ ಸವದಿ, ಚಿದಾನಂದ ಸವದಿ, ಶಿವಾನಂದ ಸವದಿ, ಶಿವಾನಂದ ಬೆಳಗಾವಿ, ನಾಗಪ್ಪ ಮೇಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net