ಧರ್ಮದ ಹಾದಿಯಲ್ಲಿ ಸಾಗೋಣ

26ATHANIGRAMIN1
Published on

ಅಥಣಿ ಗ್ರಾಮೀಣ: ಆಧ್ಯಾತ್ಮದ ನಂಬಿಕೆಯಿಂದ ಎಲ್ಲರ ಬಾಳು ಹಸನಾಗಲಿದೆ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ನದಿಇಂಗಳಗಾಂವ ಗ್ರಾಮದ ಗುರುಲಿಂಗದೇವರ ಮಠದಲ್ಲಿ ಮಹಾಶಿವರಾತ್ರಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಉತ್ಸವದಲ್ಲಿ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಧರ್ಮದ ಹಾದಿಯಲ್ಲಿ ಸಾಗಿ ದಾನ, ಧರ್ಮಗಳ ಮೂಲಕ ಸೇವೆ ಮಾಡಬೇಕು ಎಂದರು.

ಐ.ಆರ್. ಮಠಪತಿ ಮಾತನಾಡಿದರು. ಮುರುಘೇಂದ್ರ ಶಿವಯೋಗಿ ಗದ್ದುಗೆಗೆ ಮಹಾಭಿಷೇಕ, ವಿಶೇಷ ಪೂಜೆ ನೆರವೇರಿತು. ಭಕ್ತರು ಶಿವಯೋಗಿಗಳ ದರ್ಶನ ಪಡೆದರು. ವಿಠ್ಠಲ ರಾಚಗೌಡರ, ಮಂಗಲಾ ದೊಡ್ಡನವರ, ಶಾಂತವ್ವ ಕುಂಬಾರ, ಎಸ್.ಎಲ್. ಬಾಡಗಿ, ಮಾಮತಿ ಪಟ್ಟಣಶೆಟ್ಟಿ, ಪರಜೀವ ಮಠಪತಿ, ಆದಿಗೌಡ ಪಾಟೀಲ, ಎ.ಬಿ.ಚನ್ನಗೌಡರ, ಮೃತ್ಯುಂಜಯ ಮಠಪತಿ, ಸದಾಶಿವ ಅಂಬಿ, ರವಿಚಂದ್ರ ಸಂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net