

ಐನಾಪುರ: ಸಂಸ್ಥೆಯ ಸಿಬ್ಬಂದಿ ಪ್ರಾಮಾಣಿಕತೆ, ಠೇವುದಾರರು, ಸದಸ್ಯರು ಹಾಗೂ ಆಡಳಿತ ಮಂಡಳಿ ಸಹಕಾರದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸಂ 44.41 ಲ ರೂ. ನಿವ್ವಳ ಲಾಭಗಳಿಸಿದೆ ಎಂದು ಕೃಷ್ಣಾ ಕಿತ್ತೂರ ಕೋ&ಆಪ್ ಕ್ರೆಡಿಟ್ ಸೊಸೈಟಿ ಅಧ್ಯ ದೊಂಡಿರಾಮ ಪವಾರ ಹೇಳಿದರು.
ಸಂಸ್ಥೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಮಾ.31ಕ್ಕೆ ಸಹಕಾರಿಯು 44.37 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 35.47 ಕೋಟಿ ರೂ. ಠೇವಣಿ ಸಂಗ್ರಹಿಸಿ 29.64 ಕೋಟಿ ರೂ. ವಿವಿಧ ರೀತಿಯ ಸಾಲ ವಿತರಿಸಲಾಗಿದೆ. ಸಂಸ್ಥೆ ಸದಸ್ಯರಿಗೆ ಶೇ.25 ಲಾಭಾಂಶ ವಿತರಿಸಲಾಗುವುದು ಎಂದು ತಿಳಿಸಿದರು.
ಪ್ರವಿಣ ಪಾಟೀಲ ಅಧ್ಯತೆ ವಹಿಸಿದ್ದರು. ಅಣ್ಣಪ್ಪ ಮಗದುಮ್, ನಿವೃತ್ತ ಶಿಕ ಸಂಜಯ ಇಚಲಕರಂಜಿ, ಯಮನಪ್ಪ ಕಾಂಬಳೆ, ಎಸ್ಡಿಎಂಸಿ ಅಧ್ಯ ಕಲ್ಮೇಶ ಪಾಟೀಲ ಅವರನ್ನು ಸತ್ಕರಿಸಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈರಣ್ಣ ಉಗಾರೆ ಮಾತನಾಡಿದರು. ಪಿಂಟು ಪಾಟೀಲ ವರದಿ ಓದಿದರು. ಉಪಾಧ್ಯ ಶ್ರೀಕಾಂತ ಕಾಂಬಳೆ, ನಿರ್ದೇಶಕರಾದ ಕಲ್ಲಪ್ಪ ಕರಗಾರ, ಸಂಗಪ್ಪ ಪಾಟೀಲ, ಮಹಾಂತೇಶ ಮದನೆ, ವಿದ್ಯಾಧರ ಸುತಾರ, ಅಪ್ಪಾಸಾಬ ಮಗದುಮ್, ಗಣಪತಿ ಕಾಕಣಕಿ, ಬಾಳಾಸಾಬ ಖಾಮಕರ, ಭಗವಂತ ನಾಯಿಕ, ರಾಮ ಯಂಡೋಳಿ, ಸವಿತಾ ಜಂಬಗಿ, ನೀಲವ್ವ ಪಾಟೀಲ, ರಾಜು ಪಾಟೀಲ, ಗೀತಾ ಪೂಜಾರಿ, ಈರಗೌಡ ಪಾಟೀಲ ಇತರರಿದ್ದರು