

ಸವಣೂರ: ತಾಲೂಕಿನ ಹುರಳಿಕುಪ್ಪಿ ಗ್ರಾಮದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಕಡೆ ಕುಸ್ತಿಯಲ್ಲಿ ಮಾಸೂರಿನ ರೋಷನ್ ಪೈಲ್ವಾನ್ ಅವರು ಯಳವಟ್ಟಿ ಗಣೇಶ ಪೈಲ್ವಾನ್ ಅವರನ್ನು ಸೋಲಿಸಿ ಕಡೆ ಕುಸ್ತಿಯಲ್ಲಿ ಗೆದ್ದು ಬಿಗಿದರು.
ಶ್ರೀ ದುರ್ಗಾದೇವಿಯ ದೇವಸ್ಥಾನದ ಆವರಣದ ಕುಸ್ತಿ ಕಣದಲ್ಲಿ ಜ.8ರಿಂದ ಮೂರು ದಿನಗಳ ಕಾಲ ಏರ್ಪಡಿಸಿದ್ದ ಜಂಗಿ ಬಯಲು ಕುಸ್ತಿಗಳ ಕೊನೆಯ ದಿನ 80 ಜೋಡಿ ಪೈಲ್ವಾನರು ಕುಸ್ತಿ ಪ್ರದರ್ಶನ ನೀಡಿದರು. ಜಟ್ಟಿಗಳ ಸೆಣಸಾಟಕ್ಕೆ ನೆರೆದಿದ್ದ ಪ್ರೇಕ್ಷಕರ ಉತ್ಸಾಹ ಮುಗಿಲು ಮುಟ್ಟಿತು.
ಕಡೆ ಕುಸ್ತಿಗೆ ಎಂ.ಎಂ. ಪಠಾಣ ಚಾಲನೆ ನೀಡಿದರು. ಪರ್ಸಿ ಪೈಕಿ ಪೈಲ್ವಾನರ ಕುಸ್ತಿಗೆ ಚಂದ್ರಶೇಖರ ಮೆಣಸಕ್ಕನವರ, ಪಾಂಡಪ್ಪ ತಿಪ್ಪಕ್ಕನವರ ಹಾಗೂ ಉಡಚ್ಚಪ್ಪ ದೊಡ್ಡಉಡಚಪ್ಪನವರ ಚಾಲನೆ ನೀಡಿದರು.
ಪ್ರಮುಖರಾದ ಹೊನ್ನಪ್ಪ ಕೊಳ್ಳವರ, ಭರ್ಮಪ್ಪ ಕಲಾದಗಿ, ಸುಭಾಷ ಮಜ್ಜಗಿ, ಎಂ.ಜೆ. ಮುಲ್ಲಾ, ನಿಂಗಪ್ಪ ಏರಿಸಿಮಿ, ಬಿ.ಆರ್. ಕಳ್ಳಿಮನಿ, ಮಹಾಂತೇಶ ತಿಪ್ಪಕ್ಕನವರ, ರವಿ ಕರಿಗಾರ, ಏಕಪ್ಪ ಬಿಜ್ಜೂರ, ರುದ್ರಪ್ಪ ಕಳ್ಳಿಮನಿ, ಬಸವರಾಜ ಇಂಗಳಗಿ, ಟಿ.ಪಿ. ಪಾಟೀಲ, ಮಾಂತೇಶ ಪೂಜಾರ, ಹನುಮಂತಪ್ಪ ಮುಸರಿ, ಗಣೇಶ ಕುಲಕರ್ಣಿ, ಶೇಖಪ್ಪ ಕಲಕೋಟಿ, ಮಲ್ಲೇಶ ಹರಿಜನ, ಪ್ರಕಾಶ ರ್ಬಾ, ಪುಟ್ಟೇಶ ಕಳ್ಳಿಮನಿ, ಫಕೀರೇಶ ಪೂಜಾರ, ಮಂಜುನಾಥ ಕೊಪ್ಪದ, ಬಸವರಾಜ ಮುಸುರಿ, ಇತರರಿದ್ದರು.