ಮೈಸೂರು: ಗಣೇಶ ಚತುರ್ಥಿ ಪ್ರಯುಕ್ತ ಸೆಪ್ಟೆಂಬರ್ 18 ರಂದು ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ವಿವಿಧ ಮಾಂಸದ ಅಂಗಡಿಗಳನ್ನು, ಕುರಿ, ಮೇಕೆ, ಕೋಳಿ ಮಾಂಸ, ಹಂದಿ ಮಾಂಸ ಮತ್ತು ಮೀನು ವ್ಯಾಪಾರವನ್ನು ಮೈಸೂರು ನಗರದಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.