ನಕಾಶೆಯಲ್ಲಿ ಕಿತ್ತೂರು ತಾಲೂಕು ನಾಪತ್ತೆ

12kittur2
Published on

ಚನ್ನಮ್ಮನ ಕಿತ್ತೂರು: ಕಸಾಪ ಜಿಲ್ಲಾ ಘಟಕದಿಂದ ಶುಕ್ರವಾರ ಬೆಳಗಾವಿ ನಗರದಲ್ಲಿ ‘ನುಡಿ ಸಿರಿ’ ಪುಸ್ತಕ ಬಿಡುಗಡೆ ಮಾಡಲಾಯಿತು. ಜಿಲ್ಲಾ ಕಸಾಪದಿಂದ ಮುದ್ರಿಸಲಾದ ಈ ‘ನುಡಿ ಸಿರಿ’ ಪುಸ್ತಕದ ಮುಖಪುಟದ ಮೇಲಿರುವ ಬೆಳಗಾವಿ ಜಿಲ್ಲೆಯ ನಕ್ಷೆಯಲ್ಲಿ ಚನ್ನಮ್ಮನ ಕಿತ್ತೂರು ತಾಲೂಕೇ ಇಲ್ಲ.

ಕಿತ್ತೂರನ್ನು ಬೈಲಹೊಂಗಲದಲ್ಲಿರುವಂತೆ ತೋರಿಸಲಾಗಿದೆ. ‘ನುಡಿ ಸಿರಿ’ ಆಮಂತ್ರಣ ಪತ್ರಿಕೆಯಲ್ಲೂ ನಕ್ಷೆಯಲ್ಲಿ ಎಲ್ಲ ತಾಲೂಕು ಗುರ್ತಿಸಿದ್ದಾರೆ. ಆದರೆ, ಕಿತ್ತೂರು ತಾಲೂಕನ್ನು ಬೈಲಹೊಂಗಲ ತಾಲೂಕಿನ ಭಾಗವಾಗಿ ತೋರಿಸಲಾಗಿದೆ. ಜಿಲ್ಲಾಧಿಕಾರಿಗಳೇ ಪುಸ್ತಕ ಬಿಡುಗಡೆಗೊಳಿಸಿದ್ದಾರೆ.

ಪುಸ್ತಕ ಪ್ರಕಟಿಸುವ ಮುನ್ನ ಕಸಾಪ ಜಿಲ್ಲಾಧ್ಯಕ್ಷರು ಗಮನಹರಿಸಬೇಕಿತ್ತು. ಚನ್ನಮ್ಮನ ಕಿತ್ತೂರು ತಾಲೂಕಿನ ಕಸಾಪ ಅಧ್ಯಕ್ಷರು ಸಹಿತ ಗಮನ ಹರಿಸದಿರುವುದು ವಿಪರ್ಯಾಸ. ಈಗ ಆಗಿರುವ ಲೋಪ ಸರಿಪಡಿಸಬೇಕೆಲ್ಲದೆ ಮುಂದೆ ಇಂತಹ ಪ್ರಮಾದ ಆಗದಂತೆ ನೋಡಿಕೊಳ್ಳಬೇಕೆಂದು ಕಿತ್ತೂರು ತಾಲೂಕಿನ ಜನ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net