30ರಂದು ಜನತಾರಂಗ ಸಮಾವೇಶ

10 DEVDURGA 05
ದೇವದುರ್ಗದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಜನತಾರಂಗ ತಾಲೂಕು ಘಟಕ ರಚನೆ ಹಾಗೂ ಪೂರ್ವಭಾವಿ ಸಭೆಯಲ್ಲಿ ಎಂಆರ್‌ಎಚ್‌ಎಸ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ ಮಾತನಾಡಿದರು. ಹೋರಾಟಗಾರರಾದ ಎಂ.ಆರ್.ಭೇರಿ, ಜಿ.ಅಮರೇಶ, ಮಲ್ಲಯ್ಯ ಕಟ್ಟಮನಿ ಇತರರಿದ್ದರು.
Published on

ದೇವದುರ್ಗ: ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಹಾಗೂ ಜನತಾರಂಗ ಹೋರಾಟ ಬಲಗೊಳಿಸಲು ಲಿಂಗಸುಗೂರಿನಲ್ಲಿ ಜ.30ರಂದು ಜಿಲ್ಲಾ ಮಟ್ಟದ ಸಮಾವೇಶ ಆಯೋಜಿಸಲಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಮನ್ನಾಪುರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಜನತಾರಂಗ ತಾಲೂಕು ಘಟಕ ರಚನೆ ಹಾಗೂ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಗುರುವಾರ ಮಾತನಾಡಿದರು.

ಗಾಂಧೀಜಿ ಕೊಂದದಿನದಂದು ಪ್ಯಾಸಿಸ್ಟ್ ಶಕ್ತಿಗಳನ್ನು ಬಗ್ಗುಬಡಿಯಲು ಸಮಾವೇಶ ಆಯೋಜಿಸಿದ್ದು ಸುಮಾರು 10 ಸಾವಿರ ಜನರು ಭಾಗವಹಿಸಲಿದ್ದಾರೆ. ಕೇಂದ್ರ ಸರ್ಕಾರ ಜನವಿರೋಧಿ ನೀತಿ, ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ನೀಡುತ್ತಿರುವ ಹೇಳಿಕೆಗಳನ್ನು ಖಂಡಿಸುವ ಜತೆಗೆ ಮುಂದಿನ ದಿನಗಳಲ್ಲಿ ಹೋರಾಟದ ರೂಪುರೇಷಗಳನ್ನು ಚರ್ಚಿಸಲಾಗುವುದು.

ಸಮಾವೇಶದಲ್ಲಿ ಸಾಹಿತಿಗಳು, ಪ್ರಗತಿಪರರು, ಬುದ್ದಿಜೀವಿಗಳು ಹಾಗೂ ಹೋರಾಟಗಾರರು ಭಾಗವಹಿಸಿ, ಸಂವಿಧಾನ ರಕ್ಷಣೆ, ದಮನಿತರ ಶೋಷಣೆ ವಿರುದ್ಧ ಹೋರಾಟದ ಬಗ್ಗೆ ಚರ್ಚಿಸಲಾಗುವುದು. ಸಮಾವೇಶ ನಿಮಿತ್ತ ತಾಲೂಕಿನ 20ಜನ ಸಂಯೋಜಕರನ್ನು ನೇಮಕ ಮಾಡಲಾಗಿದೆ. ಜಿಲ್ಲೆಯ ಹೋರಾಟಗಾರರು, ಅಂಬೇಡ್ಕರ್ ವಾದಿಗಳು, ಸಾಹಿತಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net