ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತ

3
ಹಿರಣ್ಯಕೇಶಿ ನದಿ ಪ್ರವಾಹಕ್ಕೆ ಚಿಕಾಲಗುಡ್ಡ ಗ್ರಾಮದ ಕಲ್ಮೇಶ್ವರ ದೇವಸ್ಥಾನದೊಳಗೆ ನೀರು ನುಗ್ಗಿರುವುದು.
Published on

ಉಳ್ಳಾಗಡ್ಡಿ-ಖಾನಾಪುರ: ಸಮೀಪದ ಚಿಕಾಲಗುಡ್ಡ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ ನೀರು ನುಗ್ಗಿದ್ದರಿಂದ ಕೆಲ ಹೊತ್ತು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.

ಪೊಲೀಸರು ಹಾಗೂ ಹೆದ್ದಾರಿಯವರು ಒಂದೇ ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಪ್ರಯಾಣಿಕರಿಗೆ ಅನನುಕೂಲವಾಗುಂತೆ ಮಾಡಿದರು. ಸಂಜೆವರೆಗೂ ಹಿರಣ್ಯಕೇಶಿ ನದಿ ವಲಯದಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತು.

ಬಡಕುಂದ್ರಿಯ ಹೊಳೆಮ್ಮದೇವಿ ದೇವಸ್ಥಾನಕ್ಕೆ ಹಿರಣ್ಯಕೇಶಿ ನದಿ ನೀರು ನುಗ್ಗಿ ಜಲಾವೃತವಾಗಿದೆ. ರಾಜಾಲಖಮಗೌಡ ಜಲಾಶಯದಲ್ಲಿ ಸದ್ಯ 47,222 ಟಿಎಂಸಿ ನೀರು ಸಂಗ್ರಹವಿದೆ. ಶನಿವಾರ 43,951 ಕ್ಯೂಸೆಕ್ ನೀರು ಹರಿದು ಬಂದಿದ್ದು, ಘಟಪ್ರಭಾ ನದಿಗೆ 38,596 ಕ್ಯೂಸೆಕ್ ನೀರು ಹೊರಬಿಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net