

ವಿಜಯನಗರ ಎರಡನೇ ಹಂತದ ವಾಟರ್ ಟ್ಯಾಂಕ್ ವೃತ್ತದ ಬಳಿಯ ನೆರಳು ಬೆಳಕು ಗ್ಯಾಲರಿಯಲ್ಲಿ ಸೆ.9ರಂದು ಸಂಜೆ 4 ಗಂಟೆಗೆ ‘ಕೀಟಗಳ ಪ್ರಣಯ ಪ್ರಪಂಚ’ ಎಂಬ ಮ್ಯಾಕ್ರೊ ಛಾಯಾಚಿತ್ರ ಪ್ರದರ್ಶನ ಆಯೋಜಿಸಲಾಗಿದೆ ಎಂದು ಆಯೋಜಕ ವಿ.ಕೆ.ವಿನೋದ್‌ಕುಮಾರ್ ತಿಳಿಸಿದರು.
ಪ್ರದರ್ಶನವನ್ನು ನಿವೃತ್ತ ಪ್ರಾಂಶುಪಾಲರಾದ ಲೀಲಾ ಅಪ್ಪಾಜಿ ಉದ್ಘಾಟಿಸಲಿದ್ದಾರೆ. ಛಾಯಾಗ್ರಾಹಕ ಗಿರೀಶ್‌ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮನುಷ್ಯ ಚಂದ್ರನ ಮೇಲೆ ಇಳಿದಿದ್ದರೂ ಕೀಟ ಲೋಕದ ಮಾಹಿತಿ ಮಾತ್ರ ಸಂಪೂರ್ಣವಾಗಿ ಇನ್ನೂ ದೊರೆತಿಲ್ಲ. ಇವುಗಳ ಪ್ರಣಯ ಲೋಕ ವಿಶೇಷವಾಗಿದ್ದು, ಈ ವಿಷಯವನ್ನೇ ಆಧರಿಸಿದ ಛಾಯಾಚಿತ್ರ ಪ್ರದರ್ಶನ ಇದಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.