

ಅಳವಂಡಿ: ಜಾತ್ರೆ, ಹಬ್ಬ, ಹರಿದಿನ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಜನರು ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಅಳವಂಡಿ ಶ್ರೀ ಸಿದ್ದೇಶ್ವರ ಸಂಸ್ಥಾನಮಠದ ಶ್ರೀಮರುಳಾರಾದ್ಯ ಶಿವಾಚಾರ್ಯರು ತಿಳಿಸಿದರು. ಸಮೀಪದ ಘಟ್ಟಿರಡ್ಡಿಹಾಳ ಗ್ರಾಮದಲ್ಲಿ ಅಳವಂಡಿಯ ಶ್ರೀಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಭಕ್ತರಿಗೆ ಆಮಂತ್ರಣ ನೀಡಿ ಭಾನುವಾರ ಮಾತನಾಡಿದರು. ಸಾರ್ವಜನಿಕರ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಜಾತ್ರಾ ಮಹೋತ್ಸವದಲ್ಲಿ ನಡೆಯುವ ಸಾಮೂಹಿಕ ಮದುವೆಗಳು ಸಹಕಾರಿಯಾಗಿವೆ. ಜಾತ್ರೆಯಲ್ಲಿ ನಡೆಯುವ ಅಯ್ಯಚಾರ, ಧಾರ್ಮಿಕ ಸಭೆ, ಶಿವದೀಕ್ಷೆ ಜಾಗೃತಿ ಮುಂತಾದ ಕಾರ್ಯಕ್ರಮಗಳ ಉಪಯೋಗ ಪಡೆದುಕೊಳ್ಳಬೇಕು. ೆ.9ರಿಂದ 10ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ೆ.9 ಸಾಮೂಹಿಕ ಮದುವೆ ಹಾಗೂ ಶ್ರೀಸಿದ್ದೇಶ್ವರ ರಥೋತ್ಸವ ನಡೆಯಲಿದೆ. ೆ.10ರಂದು ಅಡ್ಡಪಲ್ಲಕ್ಕಿ ಹಾಗೂ ಕಡುಬಿನ ಕಾಳಗ, ಮದ್ದು ಸುಡುವ ಕಾರ್ಯಕ್ರಮ ನಡೆಯಲಿದೆ ಎಂದರು.