

ಬೆಳಗಾವಿ: ನಗರದ ನ್ಯಾಯಾಲಯ ಆವರಣದ ವಾರ್ತಾ ಭವನದಲ್ಲಿ ಮೇ 5ರಂದು ಬೆಳಗ್ಗೆ 10 ಗಂಟೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ವತಿಯಿಂದ ಕರೊನಾ ಸ್ವಯಂ ಸೇವಕರು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದಾರೆ.
ಸ್ವಯಂ ಸೇವಕರು ಹಾಗೂ ಆಸಕ್ತ ಸಾರ್ವಜನಿಕರು ಮೇ 3ರ ಸಂಜೆ 5 ಗಂಟೆಯೊಳಗೆ ಡಿ.ಎನ್. ಮಿಸಾಳೆ
(ಮೊ: 9480398025) ಹಾಗೂ ಶಿವಾನಂದ ಗುಮ್ಮಗೋಳ (ಮೊ: 6366619654) ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಕರೊನಾ ವೈರಸ್ ಹಿನ್ನೆಲೆಯಲ್ಲಿ ಬಡ ಕುಟುಂಬಗಳಿಗೆ ತುರ್ತು ಅಗತ್ಯವಿರುವ ಔಷಧ ಹಾಗೂ ದಿನಸಿ ಒದಗಿಸುವ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜಾಗೃತಿ ಮೂಡಿಸುತ್ತಿರುವ ಸ್ವಯಂ ಸೇವಕರು ರಕ್ತದಾನ ಶಿಬಿರದಲ್ಲಿ ಭಾಗವಹಿಸಲಿದ್ದಾರೆ ಎಂದು ರೆಡ್‌ಕ್ರಾಸ್ ಸಂಸ್ಥೆ ತಿಳಿಸಿದೆ.