30 ರಂದು ಹೂವಿನಹಡಗಲಿ ಪುರಸಭೆ ಮುತ್ತಿಗೆ

26 HDLP 02
ಅಟವಾಳಗಿ ಕೊಟ್ರೇಶ
Published on

ಹೂವಿನಹಡಗಲಿ: ಕಾಂಗ್ರೆಸ್ ಚಿಹ್ನೆ ಮತ್ತು ಬಿ ಾರ್ಮನೊಂದಿಗೆ ಪುರಸಭೆ ಸದಸ್ಯರಾದವರು ಜ.28 ರಂದು ಸಂಪರ್ಕಕ್ಕೆ ಬಾರದಿದ್ದರೆ ಪಟ್ಟಣದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಗಿ ಕೊಟ್ರೇಶ ಹೇಳಿದರು. ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅವರ ಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಜ.30 ರಂದು ನಿಗದಿಯಾಗಿದ್ದು, ನಮ್ಮ ಪಕ್ಷದ ಎಲ್ಲ ಸದಸ್ಯರಿಗೂ ಈಗಾಲೇ ವಿಪ್‌ಜಾರಿ ಮಾಡಲಾಗಿದೆ. ವಿಪ್ ಸ್ವೀಕರಿಸದ ಸದಸ್ಯರ ಮನೆಗಳಿಗೆ ತೆರಳಿಗೆ ಅವರ ಮನೆಯ ಗೋಡೆಗಳಿಗೆ ನೋಟಿಸ್ ಅಂಟಿಸಲಾಗಿದೆ. ನಮ್ಮ ಪಕ್ಷದ ಪ್ರಮುಖರು ಸದಸ್ಯರನ್ನು ಸಂಪರ್ಕಿಸಲು ಯತ್ನಿಸುತ್ತಿದ್ದು, ಇಲ್ಲಿಯವರೆಗೂ ಅವರು ಸಂಪರ್ಕಕ್ಕೆ ದೊರಕುತ್ತಿಲ್ಲ.

ಅವರಿಗೆ ಏನಾದರು ಬಿನ್ನಾಭಿಪ್ರಾಯಗಳಿದ್ದರೆ ನಮ್ಮ ನಾಯಕರ ಸಮ್ಮುಖದಲ್ಲಿ ಚರ್ಚೆಮಾಡಬೇಕು. ಜ.28 ರೊಳಗೆ ನಮ್ಮ ಸಂಪರ್ಕಕ್ಕೆ ಬಾರದಿದ್ದರೆ ಪಟ್ಟಣದಲ್ಲಿ ಪಕ್ಷದಿಂದ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಜ.30 ರಂದು ಪುರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದರು. ಇಟ್ಟಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಹನುಮಂತಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಹಾಲೇಶ, ಜಿಪಂ ಮಾಜಿ ಸದಸ್ಯರಾದ ವಿಜಯಕುಮಾರ್, ವಸಂತ್ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪಿ.ಟಿ.ಭರತ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net