

ಮಸ್ಕಿ: ಪಟ್ಟಣದ ಶ್ರೀ ಭ್ರಮರಾಂಬ ದೇವಸ್ಥಾನದಲ್ಲಿ ಏ.30ರಂದು ಮಹಾಮನೆ ಸಮಿತಿಯಿಂದ ಬಸವ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದು ಸಮಿತಿ ಅಧ್ಯಕ್ಷ ದುರುಗಣ್ಣ ಮಾಸ್ತಾರ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಮಹಾಮನೆ ಸಮಿತಿ ಏರ್ಪಡಿಸಿದ್ದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು. ಪ್ರತಿ ವರ್ಷದಂತೆ ಬಸವ ಜಯಂತಿ ಅಂಗವಾಗಿ ಅಂದು ಬೆಳಗ್ಗೆ 8 ಗಂಟೆಗೆ ಭ್ರಮರಾಂಬ ದೇವಸ್ಥಾನದಿಂದ ಬಸವಣ್ಣಭಾವಚಿತ್ರ ಮೆರವಣಿಗೆ ನಡೆಸಲಾಗುತ್ತದೆ ಎಂದರು.
ಪ್ರಮುಖರಾದ ಡಾ.ಶಿವಶರಣಪ್ಪ ಇತ್ಲಿ, ಡಾ.ಬಿ.ಎಚ್.ದಿವಟರ್, ಮಹಾಂತೇಶ ಮಸ್ಕಿ, ಡಾ.ಪಂಚಾಕ್ಷರಯ್ಯ ಕಂಬಾಳಿಮಠ, ಬಸವರಾಜ ಮಿಟ್ಟಿಮನಿ, ಮಲ್ಲಿಕಾರ್ಜುನ ಕಂದಗಲ್, ವೀರಭದ್ರಗೌಡ ಹಳೇಕೋಟೆ, ಮಲ್ಲೇಶಪ್ಪ ಬ್ಯಾಳಿ, ಮಲ್ಲಿಕಾರ್ಜುನ ನಾಯಿನೆಗಲಿ, ವಿವೇಕನಾಂದ ಎಲಿಗಾರ, ಅಮರಪ್ಪ ಅಂಗಡಿ, ಅಮರೇಶ ಬ್ಯಾಳಿ, ಶರಣಪ್ಪ ಎಲಿಗಾರ, ಸುರೇಶ ಎಚ್. ಇತರರಿದ್ದರು.
ತಾಲೂಕು ಆಡಳಿತದಿಂದ ಆಚರಣೆ: ತಾಲೂಕು ಆಡಳಿತದಿಂದ ತಹಸಿಲ್ ಕಚೇರಿಯಲ್ಲಿ ಏ.30ರಂದು ಬಸವ ಜಯಂತಿ ಆಚರಿಸಲಾಗುವುದು ಎಂದು ತಹಸೀಲ್ದಾರ್ ಡಾ.ಮಲ್ಲಪ್ಪ ಕೆ.ಯರಗೋಳ ಹೇಳಿದರು. ತಾಲೂಕು ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ಎಲ್ಲ ಕಚೇರಿಗಳಲ್ಲಿ ಕಡ್ಡಾಯವಾಗಿ ಬಸವ ಜಯಂತಿ ಆಚರಣೆ ಮಾಡುವಂತೆ ಸೂಚಿಸಿದರು.