30ರಂದು ಅಡವಿಸಿದ್ಧೇಶ್ವರ ಶಿಲಾಮಂದಿರ ಲೋಕಾರ್ಪಣೆ

utaknoor swamiji
ಮರಿಬಸವರಾಜ ಶ್ರೀಗಳು
Published on

ಮಾನ್ವಿ: ತಾಲೂಕಿನ ಉಟಕನೂರು ಗ್ರಾಮದಲ್ಲಿ ಏ.30ರಂದು ಅಡವಿ ಸಿದ್ಧೇಶ್ವರರ ನೂತನ ಶಿಲಾಮಂದಿರ ಲೋಕಾರ್ಪಣೆಗೊಳ್ಳಲಿದೆ ಎಂದು ಶ್ರೀಮಠದ ಮರಿಬಸವರಾಜ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದ್ದಾರೆ.

ಏ.10 ರಿಂದ 29ರವರೆಗೆ ಬಸವ ಪುರಾಣ, ಏ.30 ರಂದು ಅಡವಿ ಸಿದ್ಧೇಶ್ವರರ ನೂತನ ಶಿಲಾ ಮಂದಿರ ಉದ್ಘಾಟನೆ, ಪಟ್ಟಾಧಿಕಾರ ಮಹೋತ್ಸವ ಮತ್ತು ಜಂಗಮ ವಟುಗಳಿಗೆ ಅಯ್ಯಚಾರ ದೀಕ್ಷೆ, ನೂತನ ರಥ ಲೋಕಾರ್ಪಣೆಗೊಳ್ಳಲಿದೆ.

ಮೇ 1ರಂದು ಸಾಮೂಹಿಕ ವಿವಾಹ, ಮೇ 2ರಂದು ಮುತ್ತೈದೆಯರಿಗೆ ಉಡಿ ತುಂಬುಕ ಕಾರ್ಯಕ್ರಮ, ಮೇ 3ರಂದು ರೈತ ಸಮಾವೇಶ, ಮೇ 4ರಂದು ಲಕ್ಷ ದೀಪೋತ್ಸವ ಜರುಗಲಿದೆ. ಭಕ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶ್ರೀಗಳು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net