

ಸಿರವಾರ: ತಾಲೂಕಿನ ಬಲ್ಲಟಗಿ ಗ್ರಾಮದ ಲಿಂ.ಬಸವಲಿಂಗಯ್ಯ ಸ್ವಾಮಿಗಳ ಜಾತ್ರೆ ಅಂಗವಾಗಿ ಮಾ.27ರಂದು ಕಾಶಿ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಆಗಮಿಸಲಿದ್ದಾರೆ ಎಂದು ವೇ.ಮೂ ಬಸವರಾಜ ಸ್ವಾಮಿ ಹಿರೇಮಠ ಬಲ್ಲಟಗಿ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರೆ ನಿಮಿತ್ತ ಮಾ.17 ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು, ಪ್ರವಚನ, ಮಾ.18ಕ್ಕೆ ದಿಂಗಾಲೇಶ್ವರ ಶ್ರೀ ಗಳಿಂದ ಪ್ರವಚನ, 23ರಂದು ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ
25ಕ್ಕೆ ರಂಗೋಲಿ ಸ್ಪರ್ಧೆ, 26 ರಂದು ಸಂಜೆ 6ಕ್ಕೆ ಉಚ್ಚಾಯ ಮಹೋತ್ಸವ, ಮಾ.27ರಂದು ಬಸವಲಿಂಗಯ್ಯ ಶ್ರೀಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಕಾಶಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮಸಭೆ ಜರುಗಲಿದೆ ಎಂದು ತಿಳಿಸಿದರು.