ಮಾನ್ವಿ: ನ. 26ರಂದು ಸಂವಿಧಾನ ಉತ್ಸವ ಸಮಾರಂಭ ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸಂವಿಧಾನ ಉತ್ಸವ ಸಮಿತಿ ಸಂಚಾಲಕ ತಿಪ್ಪಣ್ಣ ಬಾಗಲವಾಡ ತಿಳಿಸಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಅಂದು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಟಿಎಪಿಎಂಎಸ್ ಮೈದಾನದವರೆಗೆ ಬೃಹತ್ ಮೆರವಣಿಗೆ ಮೂಲಕ ಬಹಿರಂಗ ಸಭೆ ನಡೆಯಲಿದೆ.
ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ನಮ್ಮ ಸಂಸತ್ತಿನಲ್ಲಿ ಅಂಗೀಕರಿಸಿದ ದಿನವಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಅವರು 2 ವಷರ್ 11 ತಿಂಗಳ ದಿನಗಳ ಸುದೀರ್ಘ ಅವಧಿಯಲ್ಲಿ ರಚನೆಗೊಂಡ ಸಂವಿಧಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2015ನೇ ಇಸ್ವಿಯಲ್ಲಿ ಭಾರತ ಸರ್ಕಾರ ಈ ದಿನವನ್ನು ಸಂವಿಧಾನ ಸಮರ್ಪಣಾ ದಿನವನ್ನಾಗಿ ಆಚರಿಸುವಂತೆ ಸೂಚಿಸಿದೆ ಎಂದರು.
ಸಂವಿಧಾನ ಉತ್ಸವ ತಾಲೂಕು ಸಮಿತಿ ಯಲ್ಲಪ್ಪ ಹಿರೇಬಾದರದಿನ್ನಿ, ವಕೀಲ ಪಿ. ರವಿಕುಮಾರ ಪ್ರಮುಖರಾದ ಪ್ರಭುರಾಜ ಕೊಡ್ಲಿ, ಲಕ್ಷ್ಮಣ ಜಾನೇಕಲ್, ಚಂದ್ರಶೇಖರ ನಾಯಕ, ಬಸವರಾಜ ನಕ್ಕುದಿ, ರವೀಂದ್ರ ಜಾನೇಕಲ್, ಶಿವರಾಜ ಉಮಳಿಹೊಸೂರು, ಮಾರೆಪ್ಪ ಹರವಿ ಇನ್ನಿತರರು ಇದ್ದರು.