21ರಂದು ಅಂಬಿಗರ ಚೌಡಯ್ಯ ಜಯಂತ್ಯುತ್ಸವ

Published on

ಗಂಗಾವತಿ: ತಾಲೂಕು ಆಡಳಿತ ಮತ್ತು ಗಂಗಾಮತ ಸಮಾಜದ ಸಹಯೋಗದೊಂದಿಗೆ ಜ.21ರಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗುವುದು ಎಂದು ಶಿರಸ್ತೇದಾರ್ ರವಿಕುಮಾರ ನಾಯಕ್ವಾಡಿ ಹೇಳಿದರು.

ನಗರದ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ಜಯಂತ್ಯುತ್ಸವ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅರ್ಥ ಪೂರ್ಣ ಮತ್ತು ಅಚ್ಚುಕಟ್ಟಾಗಿ ಜಯಂತಿ ಆಚರಿಸಲಾಗುತ್ತಿದ್ದು, ವೃತ್ತದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗುವುದು.

ಕಾರ್ಯಕ್ರಮದ ರೂಪುರೇಷೆ ಮತ್ತು ವ್ಯವಸ್ಥೆ ಜವಾಬ್ದಾರಿ ಕುರಿತು ಅಂಬಿಗರ ಚೌಡಯ್ಯ ಯುವಕ ಸಂಘದ ತಾಲೂಕು ಅಧ್ಯಕ್ಷ ಹನುಮೇಶ ಬಟಾರಿ ಮಾತನಾಡಿದರು.

ತಾಲೂಕು ಘಟಕದ ಗೌರವ ಅಧ್ಯಕ್ಷ ಅಂಬಿಗರ ಅಂಜಿನಪ್ಪ, ಪದಾಧಿಕಾರಿಗಳಾದ ಎಚ್. ವೈ.ಮನಗೂಳಿ, ಹುಲಗಪ್ಪ ಕಾಪು, ಆಂಜನೇಯ ಮಟ್ಟೂರು, ಮರಳಿ ನಿರುಪಾದಿ, ಹನುಮೇಶ ಕುಂಟೋಜಿ, ಸಿದ್ದು ಹೊಸಹಳ್ಳಿ, ಚಂದ್ರು ಮುಕ್ಕುಂದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net