17ರಂದು ನೀರಮಾನ್ವಿ ಯಲ್ಲಮ್ಮ ರಥೋತ್ಸವ

17 NEERMANVI 02
ನೀರಮಾನ್ವಿ ಯಲ್ಲಮ್ಮದೇವಿ
Published on

ಮಾನ್ವಿ: ತಾಲೂಕಿನ ನೀರಮಾನ್ವಿ ಯಲ್ಲಮ್ಮದೇವಿ ಜಾತ್ರೆ ಫೆ. 17 ರಂದು ಜರುಗಲಿದೆ ಎಂದು ದೇವಸ್ಥಾನದ ಅಧ್ಯಕ್ಷ ಹಾಗೂ ತಹಸೀಲ್ದಾರ್ ರಾಜು ಪಿರಂಗಿ ತಿಳಿಸಿದ್ದಾರೆ.

ಜಾತ್ರೆ ನಿಮಿತ್ತ ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜೆ, ಭಕ್ತರಿಂದ ದೇವಿಗೆ ಕಾಯಿ, ಕರ್ಪೂರ, ನೈವೇದ್ಯ ಅರ್ಪಣೆ, ಸಂಜೆ 4 ಗಂಟೆಗೆ ಯಲ್ಲಮ್ಮದೇವಿ ಪಲ್ಲಕ್ಕಿ ಉತ್ಸವ, ನಂತರ ರಥೋತ್ಸವ ಜರುಗಲಿದೆ. ಜಾತ್ರೆಗೆ ಬರುವ ಭಕ್ತರಿಗಾಗಿ ರಾಯಚೂರು, ಕೊಪ್ಪಳ್ಳ, ಬಳ್ಳಾರಿ, ಸಿಂಧನೂರು, ಸಿರವಾರ ಸೇರಿ ಇತರ ನಗರ ಪ್ರದೇಶಗಳಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net