

ಸುಂಟಿಕೊಪ್ಪ: ಇಲ್ಲಿನ ವಾಹನ ಚಾಲಕರ ಸಂಘದ 54ನೇ ವರ್ಷದ ಅದ್ದೂರಿ ಆಯುಧ ಪೂಜಾ ಸಮಾರಂಭ ಅ.11ರಂದು ಸಂಘದ ಸಾರ್ವಜನಿಕ ವೇದಿಕೆಯಲ್ಲಿ ನಡೆಯಲಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ವಹಿಸಲಿದ್ದು, ಉದ್ಘಾಟನೆಯನ್ನು ಕೊಡಗು ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್, ವಿಟ್ಲದ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ವಿಧಾನ ಪರಿಷತ್ ಮಾಜಿ ಸದಸ್ಯೆಯರಾದ ವೀಣಾ ಅಚ್ಚಯ್ಯ, ಗ್ರಾಪಂ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಸುಂಟಿಕೊಪ್ಪ ಕರ್ನಾಟಕ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಪಿ.ಸಿ.ಹಸೈನಾರ್ ಹಾಜಿ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕುಶಾಲನಗರ ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ, ಸುಂಟಿಕೊಪ್ಪ ಎವರ್‌ಗ್ರೀನ್ ಗ್ರೂಪ್ ಮಾಲೀಕ ಎ.ಬಿ.ಅಜೀಜ್, 7ನೇ ಹೊಸಕೋಟೆ ಉದ್ಯಮಿ ಕಿರಣ್‌ಗೌಡ, ಬೆಂಗಳೂರಿನ ಹಿರಿಯ ವಕೀಲರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಚಂದ್ರಮೌಳಿ, ಕಾಫಿ ಬೆಳೆಗಾರರಾದ ಜಗನ್ನಾಥ ಶೆಣೈ, ಜಿಪಂ ಮಾಜಿ ಸದಸ್ಯರಾದ ಪಿ.ಎಂ.ಲತೀಫ್, ಬಾರತೀಶ್, ಕಾಫಿ ಬೆಳೆಗಾರರಾದ ಡಿ.ವಿನೋದ್ ಶಿವಪ್ಪ, ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್.ವಿಶ್ವ, ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಎನ್.ರವೀಂದ್ರ, ತಾಪಂ ಮಾಜಿ ಉಪಾಧ್ಯಕ್ಷ ಜರ್ಮಿ ಡಿಸೋಜ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್, ಸ್ಯಾಂಡಲ್‌ವುಡ್ ತೋಟದ ಮಾಲೀಕರಾದ ಎಸ್.ಯು.ಜಾಹೀದ್, ಗ್ರಾಪಂ ಮಾಜಿ ಅಧ್ಯಕ್ಷ ಕ್ಲಾಡಿಯಸ್‌ಲೋಬೋ, ಉದ್ಯಮಿಗಳಾದ ಮೊದು, ಸಿದ್ಧಲಿಂಗಪುರ ಕೃಷಿಕ ಎ.ಎಸ್.ರಾಮಣ್ಣ, ಎಸ್‌ಡಿಎಂ ಟ್ರಸ್ಟ್‌ನ ಸುಂಟಿಕೊಪ್ಪ ಘಟಕದ ಅಧ್ಯಕ್ಷ ಮುಕುಲ್‌ಮಹೇಂದ್ರ, ಸುಂಟಿಕೊಪ್ಪ ಯುವ ಮುಖಂಡ ಪಿ.ಎಲ್.ಅರ್ಷದ್, ಕಾಂಗ್ರೆಸ್ ಮುಖಂಡ ಅನೂಪ್ ಕುಮಾರ್ ಮತ್ತು ಗ್ರೇಡ್ 1 ಗ್ರಾಪಂ ಸರ್ವ ಸದಸ್ಯರು ಆಗಮಿಸಲಿದ್ದಾರೆ.
ಈ ಬಾರಿ ಸ್ಥಳೀಯ ಡಾನ್ಸ್ ಶಾಲಾ ತಂಡದ ಮಕ್ಕಳು ಹಾಗೂ ಸಾರ್ವಜನಿಕರಿಗೆ ಡಾನ್ಸ್ ಮೇಳ ಆಯೋಜಿಸಲಾಗಿದೆ. ಹಿರಿಯ ಚಾಲಕ ಎಚ್.ಉಸ್ಮಾನ್, ನಿವೃತ್ತ ಯೋಧ ವಿಲ್ಲಿಯಂ ಮೆನೇಜೆಸ್, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿ ಚಿತ್ರಕುಮಾರಿ ಅವರನ್ನು ಸನ್ಮಾನಿಸಲಾಗುವುದು. ಅಲ್ಲದೆ ದೊಡ್ಡ ವಾಹನಗಳ ಮತ್ತು ಚಿಕ್ಕ ವಾಹನಗಳಿಗೆ ಅಲಂಕಾರ, ಅಂಗಡಿ ಮಳಿಗೆ ಅಲಂಕಾರ ಸ್ಪರ್ಧೆ, ವರ್ಕ್‌ಶಾಪ್, ಸರ್ಕಾರಿ ಕಚೇರಿ ಮತ್ತು ಸಂಘ, ಸಂಸ್ಥೆ ಅಲಂಕಾರ, ಆಟೋ ರಿಕ್ಷಾ ಅಲಂಕಾರ ಸ್ಪರ್ಧೆಗಳು ನಡೆಯಲಿವೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.