11ರಂದು ಚಿದಂಬರೇಶ್ವರ ರಥೋತ್ಸವ

CHIDAMBARA TEMPLE
ಚಿದಂಬರ ದೇವಸ್ಥಾನ
Published on

ಸವದತ್ತಿ: ಸಮೀಪದ ಗುರ್ಲಹೊಸೂರಿನ ಚಿದಂಬರೇಶ್ವರ ಮಹಾಸಂಸ್ಥಾನದಲ್ಲಿ ಚಿದಂಬರೇಶ್ವರ ದೇವಸ್ಥಾನದ ಧರ್ಮಾಧಿಕಾರಿಗಳಾದ ದಂಡಪಾಣಿ ದೀಕ್ಷಿತರು ಹಾಗೂ ಪ್ರಸನ್ನ ದೀಕ್ಷಿತರ ನೇತತ್ವದಲ್ಲಿ ನ.6ರಿಂದ 13ರವರೆಗೆ ಚಿದಂಬರೇಶ್ವರ ಅವತಾರ ಜಯಂತಿ ಶೈವಾಗಮೋಕ್ತ ಉತ್ಸವ ಹಾಗೂ ರಥೋತ್ಸವ ನಡೆಯಲಿದೆ.

ಮಹಾಗಣಪತಿ ಹಾಗೂ ಗೋಪೂಜೆಯೊಂದಿಗೆ ಶೈವಾಗಮೋಕ್ತದ ಸ್ವಸ್ತಿ ಪುಣ್ಯಾಹವಾಚನ ಋತ್ವಿಗ್ವರ್ಣ ಅಂಕುರಾರೊಪಣ ನಾಂದಿ ಸ್ಥಾಪನೆ, ಧ್ವಜಾರೋಹಣ ಗಂಗಾಪೂಜೆ, ಯಜ್ಞ ಮಂಟಪ ಪ್ರವೇಶ, ದೇವತಾ ಸ್ಥಾಪನೆ, ಮಹಾಪೂಜೆ ನಿತ್ಯ ಹೋಮ ಮಹಾಮಂಗಳಾರತಿ ಶೈವಾಗ ಮೋಕ್ತ ಹೋಮ ಪ್ರಾರಂಭ ಚಿದಂಬರ ಮೂಲ ಮಂತ್ರ ಜಪ, ಬಲಿ ವಾಹನೋತ್ಸವ, ಅಷ್ಟಾವಧಾನ ಸೇವೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ಪ್ರತಿದಿನ ನಡೆಯಲಿದೆ.

ಗರುಡವಾಹನೋತ್ಸವ, ಮಯೂರ ವಾಹನೋತ್ಸವ, ಶೇಷ ವಾಹನೋತ್ಸವ, ಪುಷ್ಪವಾಹನೋತ್ಸವ, ಹಂಸ ವಾಹನೋತ್ಸವ, ವಷಭ ವಾಹನೋತ್ಸವ, ಅಶ್ವ ವಾಹನೋತ್ಸವ, ಗಜವಾಹನೋತ್ಸವ, ತೈಲಾಭ್ಯಂಗ ಅಭಿಷೇಕ, ತೊಟ್ಟಿಲೋತ್ಸವ, ಸುಮಂಗಲೆಯರಿಂದ ಕುಂಕುಮಾರ್ಚನೆ. ಅವಭತ ಸ್ನಾನ, ಶೈವಾಗಮೋಕ್ತ ಯಜ್ಞದ ಪೂರ್ಣಾಹುತಿ, ಗುರುಗಳಿಂದ ಆಶೀರ್ವಚನ, ಕಾರ್ತಿಕ ದೀಪಾರಾಧನೆ ಮಹಾಮಂಗಳಾರತಿ ನಾಂದಿ ವಿಸರ್ಜನೆ,

ವಿನಾಯಕ ಶಾಂತಿ, ಸಂಪ್ರೋಕ್ಷಣ ವಿಧಿ ಸತ್ಯನಾರಾಯಣ ಪೂಜೆ, ಧ್ವಜ ಅವರೋಹಣ ಹಾಗೂ ಎಲ್ಲಾ ಸೇವಾ ಕರ್ತರಿಗೆ ಆಶೀರ್ವಾದಪೂರ್ವಕ ಲ ಮಂತ್ರಾಕ್ಷತೆ ನೀಡುವುದರೊಂದಿಗೆ ಚಿದಂಬರೇಶ್ವರ 267ನೇ ಜಯಂತಿ ಶೈವಾಗಮೋಕ್ತ ಉತ್ಸವ ಮಂಗಲಗೊಳ್ಳುವುದು ಎಂದು ದೇವಸ್ಥಾನದ ಆಡಳಿತಾಧಿಕಾರಿ ನಟೇಶ ದೀಕ್ಷಿತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net