ಒಂದೇ ವೇದಿಕೆಯಲ್ಲಿ ಸಿದ್ದು, ಬಿಎಸ್‌ವೈ

12
Published on

ಮೈಸೂರು: ರಾಜಕೀಯವಾಗಿ ಪರಸ್ಪರ ಟೀಕೆ, ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುವ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ದಿವಂಗತ ವಿ.ಶ್ರೀನಿವಾಸಪ್ರಸಾದ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮುಖಾಮುಖಿಯಾಗಿ ಸ್ನೇಹದಿಂದ ವರ್ತಿಸಿದರು. ಅಕ್ಕ-ಪಕ್ಕದಲ್ಲಿ ಕುಳಿತ್ತಿದ್ದ ಉಭಯ ನಾಯಕರು ಕೆಲವು ನಿಮಿಷಗಳ ಕಾಲ ಆಪ್ತವಾಗಿ ಮಾತನಾಡಿದರು. ಈ ವೇಳೆ ಯಡಿಯೂರಪ್ಪ ಸಿದ್ದರಾಮಯ್ಯ ಅವರ ಕೈಗೆ ಚೀಟಿಯೊಂದನ್ನು ಕೊಟ್ಟರು. ಆ ಚೀಟಿ ಹಿಡಿದುಕೊಂಡೇ ಕೆಲಕಾಲ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ವೇದಿಕೆಗೆ ಬಂದ ಸಂಸದ ಪ್ರತಾಪಸಿಂಹ ಸಿದ್ದರಾಮಯ್ಯ ಅವರ ಕಾಲಿಗೆ ನಮಸ್ಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net