

ಚಿತ್ರದುರ್ಗ: ನಗರದಲ್ಲಿ ನವೆಂಬರ್27ರಂದು ವೀರ ವನಿತೆ ಒನಕೆ ಓಬವ್ವ ಜಯಂತಿಯನ್ನು ಅದ್ಧೂರಿಯಿಂದ ಆಚರಿಸಲಾಗುವುದೆಂದು ಜಿಲ್ಲಾಧಿ ಕಾರಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು.
ಡಿಸಿ ಕಚೇರಿಯಲ್ಲಿ ಶನಿವಾರ ಓಬವ್ವ ಜಯಂತಿ ಆಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,27ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ನಗರಕ್ಕೆ ಆಗಮಿಸುತ್ತಿದ್ದಾರೆ. ಅಂದು ಅದ್ಧೂರಿಯಿಂದ ಈ ಜಯಂತಿಯನ್ನು ರಾಜ್ಯಮಟ್ಟದಲ್ಲಿ ಆಯೋಜಿಸುವಂತೆ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.
ಸರ್ಕಾರದ ಆದೇಶದಂತೆ ಓಬವ್ವ ಜಯಂತಿಯನ್ನು ನ.11ರಂದು ಸಾಂಕೇತಿಕವಾಗಿ ಆಚರಿಸಲಾಗುವುದು. 27ರಂದು ನಗರದ ಸೈನ್ಸ್ ಕಾಲೇಜು ಆವರಣದಲ್ಲಿ ರಾಜ್ಯಮಟ್ಟದ ಕಾರ‌್ಯಕ್ರಮ ಏರ್ಪಡಿಸಲಾಗುವುದು. ಅಂದು ಒನಕೆ ಓಬವ್ವ ಭಾವಚಿತ್ರದ ಭವ್ಯ ಮೆರವಣಿಗೆ, ಉಪನ್ಯಾಸ ವಿರುತ್ತದೆ.
ಜಿಲ್ಲೆಯ ಸಾಂಸ್ಕೃತಿಕ ಮಹತ್ವ ಸಾರುವ ಕಲಾ ಪ್ರಕಾರಗಳಿಗೆ ಮೆರವಣಿಗೆಯಲ್ಲಿ ಅವಕಾಶವಿರುತ್ತದೆ ಎಂದರು.
ಕೋಟೆಯಲ್ಲಿರುವ ಓಬವ್ವ ಸ್ಮಾರಕಕ್ಕೆ ಜಯಂತಿ ದಿನದಂದು ಗಣ್ಯರು ನಮನ ಸಲ್ಲಿಸಲಿದ್ದಾರೆ. ಆದ್ದರಿಂದ ಅಲ್ಲಿ ಓಬವ್ವ ಭಾವಚಿತ್ರವಿಟ್ಟು ಪುಷ್ಪಗಳಿಂದ ಅಲಂಕರಿಸಲು ಪುತಾತತ್ವ ಇಲಾಖೆ ಅನುಮತಿ ಕೊಡಬೇಕೆಂದು ಸಮುದಾಯದ ಮುಖಂಡರು ಕೋರಿದರು.
ಎಡಿಸಿ ಇ.ಬಾಲಕೃಷ್ಣ,ಎಎಸ್ಪಿ ಕುಮಾರಸ್ವಾಮಿ,ಡಿಡಿಪಿಐ ರವಿಶಂಕರ ರೆಡ್ಡಿ,ಜಿ.ಪಂ.ಯೋಜನಾ ನಿರ್ದೇಶಕ ಕೆ.ಎನ್.ಮಹಾಂತೇಶಪ್ಪ, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂಧನ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಸಮು ದಾಯದ ಮುಖಂಡರಾದ ಎಚ್.ಅಣ್ಣಪ್ಪಸ್ವಾಮಿ,ಕೆ.ಟಿ.ನಾಗರಾಜ ನಲ್ಲಿಕಟ್ಟೆ,ತಿಪ್ಪೇಸ್ವಾಮಿ,ನಿರಂಜನಮೂರ್ತಿ,ದಯಾನಂದ,ರವಿಕುಮಾ ರ್,ಜಯರಾಮ್,ಸೋಮಶೇಖರ್,ಹನುಮಂತಪ್ಪ,ಪ್ರಹ್ಲಾದ್,ಪರಮೇಶ್,ಓಬವ್ವ ವಂಶಸ್ಥೆ ಸುರ್ವಣಮ್ಮ ಇತರರು ಇದ್ದರು.
----