ಮೇ 1ರಂದು ಮಹನೀಯರ ಜಯಂತಿ ಆಚರಣೆ

Ark Jayanti
ಅರಕೇರಾ ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಡಾ.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ಅವರ ಜಯಂತಿ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು. ದಸಂಸ ತಾಲೂಕು ಸಂಚಾಲಕ ನಾಗರಾಜ ದೇವರಮನಿ ಪ್ರಮುಖರಾದ ಮುದುಕಪ್ಪ ಮೆಣಸಿನಕಾಯಿ, ಪ್ರಮೋದ್ ಭೇರಿ, ತಿಪ್ಪಣ್ಣ ಗರಡಿ ಆಲ್ಕೋಡ ಇತರರಿದ್ದರು.
Published on

ಅರಕೇರಾ: ಪಟ್ಟಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಮೇ 1ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ದಸಂಸ ತಾಲೂಕು ಸಂಚಾಲಕ ನಾಗರಾಜ ದೇವರಮನಿ ಹೇಳಿದರು.

ಪಟ್ಟಣದ ಡಾ.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ಮಾತನಾಡಿದರು. ದೇಶದ ಇಬ್ಬರು ಮಹನೀಯರ ಜಯಂತಿಯನ್ನು ತಾಲೂಕು ಮಟ್ಟದ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದೆ. ಅಂದು ಬೆಳಗ್ಗೆ 9:30ಕ್ಕೆ ಡಾ. ಅಂಬೇಡ್ಕರ್ ವೃತ್ತದಿಂದ ಮುಖ್ಯ ರಸ್ತೆಯ ಮಾರ್ಗವಾಗಿ ಕುಂಭ, ಕಳಸದೊಂದಿಗೆ ತೆರೆದ ವಾಹನದಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ, ನಂತರ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಪ್ರಮುಖರಾದ ಲಕ್ಷ್ಮಯ್ಯ ಮರಕಮದಿನ್ನಿ, ಚಿದಾನಂದ ಭೇರಿ ಮೈಲಾಪುರದೊಡ್ಡಿ, ರವಿ ಜಾಡಲದಿನ್ನಿ, ಈಶಪ್ಪ ಶಿವಂಗಿ, ನಿಂಗಪ್ಪ, ನಾಗರಾಜ, ಮೌನೇಶ ಕರಡೋಣ, ಶರಣು ಭೇರಿ, ಬಸವ ಭೇರಿ, ರಮೇಶ , ಆಂಜನೇಯ ದೇವರಮನಿ, ರವಿ ಪಿಲಗುಂಡ, ಮಹದೇವ ದೇವರಮನಿ, ಭಗವಂತ ದೇವರಮನಿ, ಹನುಮಂತ ಟೈಲರ್, ಗ್ರಾಪಂ ಸದಸ್ಯ ಭಗವಂತ, ವೀರೇಶ ಭೇರಿ, ಕರಿಯಪ್ಪ, ಹನುಮಂತ ಭೇರಿ, ಗಂಗಾಧರ ದೇವರಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net