ಮಾ.6ರಂದು ರಾಯರ 430ನೇ ವರ್ಧಂತಿ

Published on

ಕಂಪ್ಲಿ: ಗುರುಸಾರ್ವಭೌಮ ಶ್ರೀಗುರುರಾಘವೇಂದ್ರಸ್ವಾಮಿಗಳ 430ನೇ ವರ್ಧಂತಿ ಹಾಗೂ ರಥೋತ್ಸವ ನಿಮಿತ್ತ ಇಲ್ಲಿನ ಸತ್ಯನಾರಾಯಣಪೇಟೆ ಶ್ರೀಮನ್ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳ ಶಾಖಾಮಠದಲ್ಲಿ, ಮಾ.6ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

ಅಂದು ಬೆಳಗ್ಗೆ ನೈರ್ಮಲ್ಯ ವಿಸರ್ಜನೆ, ಅಷ್ಟೋತ್ತರ ಸಹಿತ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ಪ್ರಾಕಾರದಲ್ಲಿ ರಥೋತ್ಸವ, ಅಷ್ಟೋದಕ, ಮಹಾಮಂಗಳಾರತಿ ಸೇರಿ ನಾನಾ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸದ್ಭಕ್ತರು ಮಠದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ವ್ಯವಸ್ಥಾಪಕ ಪುರುಷೋತ್ತಮಾಚಾರ್, ವಿಚಾರಣಾಕರ್ತ ಟಿ.ಕೊಟ್ರೇಶ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net