ಮದಕರಿನಾಯಕ ಜಯಂತಿ ಅ.13ಕ್ಕೆ

B Kantharaja
Published on

ಚಿತ್ರದುರ್ಗ: ರಾಜವೀರ ಮದಕರಿನಾಯಕ ಜಯಂತ್ಯುತ್ಸವದ ಅಂಗವಾಗಿ ಅ. 13ರಂದು ಅದ್ದೂರಿ ಮೆರವಣಿಗೆ ನಡೆಸಲು ನಾಯಕ ಸಮಾಜ ತೀರ್ಮಾನಿಸಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಶೋಧಕರು, ಸಮಾಜದ ಮುಖಂಡರ ಸಲಹೆ ಪಡೆದು ಮದಕರಿನಾಯಕನ ನೂತನ ಭಾವಚಿತ್ರ ಅನಾವರಗೊಳಿಸಲು ಸಿದ್ಧತೆ ನಡೆಸಿದ್ದು, ಕ್ರಿಯೇಟಿವ್ ವೀರೇಶ್ ಚಿತ್ರ ಬಿಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಇನ್ನು ಮುಂದೆ ಸರಳ ಆಚರಣೆ ಇರುವುದಿಲ್ಲ. ಈ ಬಾರಿಯಿಂದ ಜಯಂತ್ಯುತ್ಸವ ಕಳೆಗಟ್ಟಲಿದೆ. ಬೇರೆ ಕಡೆಗಳಲ್ಲಿ ಆಚರಿಸುತ್ತಿದ್ದರೂ ಕೋಟೆನಗರಿಯ ಉತ್ಸವ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು, ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ನಡೆಯಬೇಕು. ಆ ನಿಟ್ಟಿನಲ್ಲಿ ಸಿದ್ಧತೆ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಪ್ರತಿ ವರ್ಷ ಮದಕರಿನಾಯಕನ ಸ್ಮರಣೋತ್ಸವ ಮೇ 15ರಂದು ಆಚರಿಸುತ್ತಿದ್ದು, ಅದು ವೇದಿಕೆ ಕಾರ್ಯಕ್ರಮವಾಗಿದೆ. ಜಯಂತ್ಯುತ್ಸವದಲ್ಲಿ ಮೆರವಣಿಗೆ ಮಾತ್ರ ನಡೆಯಲಿದೆ. ಡಿಜೆ ಜತೆಗೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಎಲ್ಲ ಸಮಾಜದವರು ಸಹಕಾರ ನೀಡುವ ವಿಶ್ವಾಸವಿದೆ ಎಂದರು.

ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ ಮಾತನಾಡಿ, ರಾಜ್ಯದ ಗಣ್ಯರಿಂದ ಮೆರವಣಿಗೆಗೆ ಚಾಲನೆ ದೊರೆಯಲಿದೆ. ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮುಖಂಡರಾದ ಸೋಮೇಂದ್ರ, ಗೋಪಾಲಸ್ವಾಮಿ ನಾಯಕ, ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net