ಜೂನ್ 2 ರಂದು ಬಂಜಾರ ಸಮುದಾಯದ ಅಸ್ಮಿತೆಯ ಕಾವ್ಯಕಥನ ‘ಗೋರ್‌ಮಾಟಿ’ ನಾಟಕ ಪ್ರದರ್ಶನ

Drama-games
Published on

ಮೈಸೂರು: ರಂಗಾಯಣ ಅಂಗಳದ ಭೂಮಿಗೀತ ರಂಗವೇದಿಕೆಯಲ್ಲಿ ಜೂನ್ 2 ರಂದು ಸಂಜೆ 6.30ಕ್ಕೆ ಬಂಜಾರ ಸಮುದಾಯದ ಅಸ್ಮಿತೆಯ ಕಾವ್ಯಕಥನ ‘ಗೋರ್‌ಮಾಟಿ’ ನಾಟಕ ಪ್ರದರ್ಶನಗೊಳ್ಳಲಿದೆ.

ರಂಗಕರ್ಮಿ ಸಿ.ಬಸವಲಿಂಗಯ್ಯ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರಂಗಾಯಣ ಕಲಾವಿದರು ಪ್ರಸ್ತುತ ಪಡಿಸಿದ್ದಾರೆ.

ಗೋರ್‌ಮಾಟಿ ಎಂದರೆ ನಮ್ಮ ಜನ ಎಂದರ್ಥ. ಇದು ಜಾತಿ ಸೂಚಕವಲ್ಲ. ಬದಲಿಗೆ ಸಂಸ್ಕೃತಿ ಸೂಚಕ. ನಮ್ಮ ನೆಲಮೂಲದ ಸಂಸ್ಕೃತಿ ಬಗ್ಗೆ ತಿಳಿಸುವ ಉದ್ದೇಶದಿಂದ ಈ ನಾಟಕ ನಿರ್ದೇಶಿಸಲಾಗಿದೆ. ಬಂಜಾರ ಜನಾಂಗದ ಸಂತೋಷ, ಸುಖ-ದುಃಖಗಳು ನಾಟಕದಲ್ಲಿವೆ. ಚರಿತ್ರೆಯಲ್ಲಿ ಇವರ ಬದುಕು ಹೇಗೆ ದುರಂತಮಯವಾಗಿದೆ ಎಂಬುದನ್ನು ನಾಟಕ ರೂಪದಲ್ಲಿ ಕಟ್ಟಿಕೊಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net